Bhavageete
Sahitya: Da Ra Bendre
Song link: Click Here
Yaarigu helonu byada
Yaarigu helonu byada..
Haraguduri benna eari
Swararagi kutu hanga
Doora doora hogonanta ||yaarigu||
Hannu hoovu tumbidanta
Ninna tota seri onda
Tinnonanta adara hesara ||yaarigu||
Kuniyonanta kudi kudi
Maniyonanta jigidu hari
Daniyadale aadonanta ||yaarigu||
Malligi mantapadaga
Galla galla hacchi kutu
Melladanile hadonanta ||yaarigu||
Havina mariyagi alli
Navunu hedeyadisona
Hoove hoovu hasire hasiru ||yaarigu||
Nidde madi maiyya bittu
Muddu matada kanasinurige
Saddu madade sagonanta ||yaarigu||
ಭಾವಗೀತೆ
ಯಾರಿಗೂ ಹೇಳೊಣು ಬ್ಯಾಡ
ಯಾರಿಗೂ ಹೇಳೊಣು ಬ್ಯಾಡ ..
ಹಾರಗುದುರಿ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗ
ದೂರ ದೂರ ಹೋಗೋಣ೦ತ ।।ಯಾರಿಗೂ।।
ಹಣ್ಣು ಹೂವು ತುಂಬಿದಂತ
ನಿನ್ನ ತೋಟ ಸೇರಿ ಒಂದ
ತಿನ್ನೋಣ೦ತ ಅದರ ಹೆಸರ ।।ಯಾರಿಗೂ।।
ಕುಣಿಯೋಣ೦ತ ಕೂಡಿ ಕೂಡಿ
ಮಣಿಯೋಣ೦ತ ಜಿಗಿದು ಹಾರಿ
ದಣಿಯದಲೆ ಆಡೋಣ೦ತ ।।ಯಾರಿಗೂ।।
ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲದನಿಲೆ ಹಾಡೋಣ೦ತ ।।ಯಾರಿಗೂ।।
ಹಾವಿನ ಮರಿಯಾಗಿ ಅಲ್ಲಿ
ನಾವೂನೂ ಹೆಡೆಯಾಡಿಸೋಣು
ಹೂವೆ ಹೂವು ಹಸಿರೆ ಹಸಿರು ।।ಯಾರಿಗೂ।।
ನಿದ್ದೆ ಮಾಡಿ ಮೈಯ್ಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೋಣ೦ತ ।।ಯಾರಿಗೂ।।

No comments:
Post a Comment