Movie: Kulavadhu (1963)
Singer: S Janaki
Song link: Click Here
Emma maneyangaladi beledondu hoovannu
Nimma madilolagiralu tandiruvevu
Kolliri maguvannu emma mane belakannu
Nimma maneyanu tumbalu oppisuvevu ||
Hettavara manegindu horagaade nee magale
Ee maneye, ee ivare ninnavaru munde
Ivare taigalu sukharu, bhagyavanu belasuvaru
Ivara devare ninna devarugalu ||
Nillu kannoresuko, nillu tai hoguvevu
Tayidira tandeyira kolliri ivala
Eradu manegala hesaru khyatigalu ulivante
Tumbidaayushyadali baali baduku ||
ಚಿತ್ರಗೀತೆ
ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳ್ಳಿರಿ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನು ತುಂಬಲು ಒಪ್ಪಿಸುವೆವು ।।ಪ।।
ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ
ಈ ಮನೆಯೆ, ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸುಖರು, ಭಾಗ್ಯವನು ಬೆಳಸುವರು
ಇವರ ದೇವರೆ ನಿನ್ನ ದೇವರುಗಳು ।।೫।।
ನಿಲ್ಲು ಕಣ್ಣೊರೆಸುಕೊ, ನಿಲ್ಲು ತಾಯ್ ಹೋಗುವೆವು
ತಾಯಿದಿರ ತಂದೆಯಿರ ಕೊಳ್ಳಿರಿ ಇವಳ
ಎರಡು ಮನೆಗಳ ಹೆಸರು ಖ್ಯಾತಿಗಳು ಉಳಿವಂತೆ
ತುಂಬಿದಾಯುಷ್ಯದಲಿ ಬಾಳಿ ಬದುಕು ।।೬।।

No comments:
Post a Comment