Movie: Naandi (1964)
Singers: P B Srinivas, S Janaki
Song link: Click Here
Vande Mataram (3)
Namma tayi bharati, padeda puneeta santati
Vishwakella keeruti, nadesuva vardhanti
Navu nadesuva vardhanti ||
Dasya bhava neegisida, swatantrya kodisida
Satya shanti saarida, mahaanatva kalisida
Harigirijanaratma, namo gandhi mahatma (2)
Harigirijanaratma, namo gandhi mahatma ||
Honeya horaatadali pranarpane maadida
Amara prakasha namo subash chandra bhose
Namo subash chandra bhose
Deshadeligeya bayasi, sukha siriya vardhisida
Yojanegala sanghatisi dakshateyali rakshisida
Navya bharatalola namo jawarlal
Navya bharatalola namo jawarlal (2)
Namma tayi bharati ||
Shantigagi tanu tetta raita sainikara preeta
Sadguna sampada saara namo lal bahaddur
Namo lal bahaddur (2)
Shramadaana bhudaana kalisi janara sukhisida
Ghanateya tanda namo aacharya vinoba
Aacharya vinoba
Kaigarike rangadali yantra vidyut tantra balasi
Badavara maneyangalava bangaradi shringarisi
Nalisida ayya namo vishweshwarayya
Nalisida ayya namo vishweshwarayya
Nalisida ayya namo vishweshwarayya
Namma tayi bharati ||
Jaya Kannada naada prakasha jaya he
Jana jeevana vikaasa jaya he
Kerala tamilandra marata desha
Arabbi samudra neere
Kaveri, tungabhadra, krishna, godavari jala dhare
Banagiri bayalina bhagya vishesha
Bhuvi bharata keertiya parusha
Vijaya he karnataka desha
Sujaya he sumadhura sulalita bhasha
Jaya he jaya he jaya he
Jaya mangala daayaki jaya he
Jaya janmabhumi jaya jaya he
Jaya jaya jaya jaya he !
ದೇಶಭಕ್ತಿ ಗೀತೆ
ವಂದೇ ಮಾತರಂ (೩)
ನಮ್ಮ ತಾಯಿ ಭಾರತಿ, ಪಡೆದ ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ, ನಡೆಸುವ ವರ್ಧಂತಿ
ನಾವು ನಡೆಸುವ ವರ್ಧಂತಿ ।।ಪ।।
ದಾಸ್ಯ ಭಾವ ನೀಗಿಸಿದ, ಸ್ವಾತಂತ್ರ್ಯ ಕೊಡಿಸಿದ
ಸತ್ಯ ಶಾಂತಿ ಸಾರಿದ, ಮಹಾನತ್ವ ಕಲಿಸಿದ
ಹರಿಗಿರಿಜನರಾತ್ಮ, ನಮೋ ಗಾಂಧಿ ಮಹಾತ್ಮ (೨)
ಹರಿಗಿರಿಜನರಾತ್ಮ, ನಮೋ ಗಾಂಧಿ ಮಹಾತ್ಮ ।।೧।।
ಹೊಣೆಯ ಹೋರಾಟದಲಿ ಪ್ರಾಣಾರ್ಪಣೆ ಮಾಡಿದ
ಅಮರ ಪ್ರಕಾಶ ನಮೋ ಸುಭಾಶ್ ಚಂದ್ರ ಭೋಸ್
ನಮೋ ಸುಭಾಶ್ ಚಂದ್ರ ಭೋಸ್
ದೇಶದೇಳಿಗೆಯ ಬಯಸಿ, ಸುಖ ಸಿರಿಯ ವರ್ಧಿಸಿದ
ಯೋಜನೆಗಳ ಸಂಘಟಿಸಿ ದಕ್ಷತೆಯಲಿ ರಕ್ಷಿಸಿದ
ನವ್ಯ ಭಾರತಲೋಲ ನಮೋ ಜವಾಹರಲಾಲ್
ನವ್ಯ ಭಾರತಲೋಲ ನಮೋ ಜವಾಹರಲಾಲ್
ನಮ್ಮ ತಾಯಿ ಭಾರತಿ ।।೨।।
ಶಾಂತಿಗಾಗಿ ತನು ತೆತ್ತ ರೈತ ಸೈನಿಕರ ಪ್ರೀತ
ಸದ್ಗುಣ ಸಂಪದ ಸಾರ ನಮೋ ಲಾಲ್ ಬಹದ್ದೂರ್
ನಮೋ ಲಾಲ್ ಬಹದ್ದೂರ್
ಶ್ರಮದಾನ ಭೂದಾನ ಕಲಿಸಿ ಜನರ ಸುಖಿಸಿದ
ಘನತೆಯ ತಂದ ನಮೋ ಆಚಾರ್ಯ ವಿನೋಬಾ
ಆಚಾರ್ಯ ವಿನೋಬಾ
ಕೈಗಾರಿಕೆ ರಂಗದಲಿ ಯಂತ್ರ ವಿದ್ಯುತ್ ತಂತ್ರ ಬಳಸಿ
ಬಡವರ ಮನೆಯಂಗಳವ ಬಂಗಾರದಿ ಶೃಂಗರಿಸಿ
ನಲಿಸಿದ ಅಯ್ಯ ನಮೋ ವಿಶ್ವೇಶ್ವರಯ್ಯ
ನಲಿಸಿದ ಅಯ್ಯ ನಮೋ ವಿಶ್ವೇಶ್ವರಯ್ಯ
ನಲಿಸಿದ ಅಯ್ಯ ನಮೋ ವಿಶ್ವೇಶ್ವರಯ್ಯ
ನಮ್ಮ ತಾಯಿ ಭಾರತಿ ।।೩।।
ಜಯ ಕನ್ನಡ ನಾಡ ಪ್ರಕಾಶ ಜಯ ಹೇ
ಜನ ಜೀವನ ವಿಕಾಸ ಜಯ ಹೇ
ಕೇರಳ ತಮಿಳಾಂದ್ರ ಮರಾಠ ದೇಶ
ಅರಬ್ಬೀ ಸಮುದ್ರ ಮೇರೇ
ಕಾವೇರಿ ತುಂಗಭದ್ರಾ ಕೃಷ್ಣಾ ಗೋಧಾವರಿ ಜಲ ಧಾರೆ
ಬನಗಿರಿ ಬಯಲಿನ ಭಾಗ್ಯ ವಿಶೇಷ
ಭುವಿ ಭಾರತ ಕೀರ್ತಿಯ ಪರುಷ
ವಿಜಯ ಹೇ ಕರ್ನಾಟಕ ದೇಶ
ಸುಜಯ ಹೇ ಸುಮಧುರ ಸುಲಲಿತ ಭಾಷಾ
ಜಯ ಹೇ ಜಯ ಹೇ ಜಯ ಹೇ
ಜಯ ಜನ್ಮ ಭೂಮಿ ಜಯ ಹೇ ಜಯ ಜಯ ಜಯ ಜಯ ಹೇ !

No comments:
Post a Comment