Movie: Nee Nanna Gellalaare (1981)
Singer: Dr. Rajkumar
Song link: Click Here
I love you, i love you (2)
Anuraaga enaitu, manaseke kallaitu
Ninna savimaatu, kahi ekaitu
Ninnolavella indenaitu, anuraaga enaitu ||
Neeli baananu biduvaga, mugillella karagi aluvante (2)
Ninna premadinda naa duragi
Nanna kangalella kanniragi
Hagalirulella ninna nenapaitu
Sarasa harusha bari kanasaitu, anuraaga enaitu ||
Odi baruva nadiyalli, kadalaase tumbi harivante (2)
Ninna sero aase naa kandaga, jothe baalalendu bali bandaga
Sidilonderagi badidantagi, virasa viraha gati nanagaitu
Anuraaga enaitu, manaseke kallaitu ||
ಚಿತ್ರಗೀತೆ
ಐ ಲವ್ ಯು, ಐ ಲವ್ ಯು (೨)
ಅನುರಾಗ ಏನಾಯ್ತು, ಮನಸೇಕೆ ಕಲ್ಲಾಯ್ತು
ನಿನ್ನ ಸವಿಮಾತು, ಕಹಿ ಏಕಾಯ್ತು
ನಿನ್ನೊಲವೆಲ್ಲಾ ಇಂದೇನಾಯ್ತು, ಅನುರಾಗ ಏನಾಯ್ತು ।।ಪ।।
ನೀಲಿ ಬಾನನು ಬಿಡುವಾಗ, ಮುಗಿಲೆಲ್ಲಾ ಕರಗಿ ಅಳುವಂತೆ (೨)
ನಿನ್ನ ಪ್ರೇಮದಿಂದಾ ನಾ ದೂರಾಗಿ
ನನ್ನ ಕಣ್ಗಳೆಲ್ಲಾ ಕಣ್ಣೀರಾಗಿ
ಹಗಲಿರುಳೆಲ್ಲಾ ನಿನ್ನ ನೆನಪಾಯ್ತು
ಸರಸ ಹರುಷ ಬರಿ ಕನಸಾಯ್ತು, ಅನುರಾಗ ಏನಾಯ್ತು ।।೧।।
ಓಡಿ ಬರುವ ನದಿಯಲ್ಲಿ, ಕಡಲಾಸೆ ತುಂಬಿ ಹರಿವಂತೆ (೨)
ನಿನ್ನ ಸೇರೊ ಆಸೆ ನಾ ಕಂಡಾಗ, ಜೊತೆ ಬಾಳಲೆಂದೂ ಬಳಿ ಬಂದಾಗ
ಸಿಡಿಲೊಂದೆರಗಿ ಬಡಿದಂತಾಗಿ, ವಿರಸ ವಿರಹ ಗತಿ ನನಗಾಯ್ತು
ಅನುರಾಗ ಏನಾಯ್ತು, ಮನಸೇಕೆ ಕಲ್ಲಾಯ್ತು ।।೨।।
No comments:
Post a Comment