Movie: Samshaya Phala (1970)
Singer: p Susheela
Song link: Click Here
Harusha doorada meru, harusha doorada meru
Yeradenna bala teru, payana yeru peru (2)
Harusha durada meru ||
Omme hannagi kanda kannige naa hunnadene
Kahigeedadene patigendendigu bedaadene
Vidhi kaivadake, tadeye, illaveke
Harusha durada meru, eradenna bala teru
Payana eru peru, harusha doorada meru ||
Noviginnelu neleye illave saave illave
Saavigu illiye barabekemba hahakaarave
Bidadi yatane, edeya bege bene
Harusha durada meru
Yeradenna bala teru, payana yeru peru
Harusha doorada meru ||
ಚಿತ್ರಗೀತೆ
ಹರುಷ ದೂರದ ಮೇರು, ಹರುಷ ದೂರದ ಮೇರು
ಏರದೆನ್ನ ಬಾಳ ತೇರು, ಪಯಣ ಏರು ಪೇರು (೨)
ಹರುಷ ದೂರದ ಮೇರು ।।ಪ।।
ಒಮ್ಮೆ ಹಣ್ಣಾಗಿ ಕಂಡ ಕಣ್ಣಿಗೆ ನಾ ಹುಣ್ಣಾದೆನೆ
ಕಹಿಗೀಡಾದೆನೆ ಪತಿಗೆಂದೆಂದಿಗೂ ಬೇಡಾದೆನೆ
ವಿಧಿ ಕೈವಾಡಕೆ, ತಡೆಯೇ, ಇಲ್ಲವೇಕೆ
ಹರುಷ ದೂರದ ಮೇರು, ಏರದೆನ್ನ ಬಾಳ ತೇರು
ಪಯಣ ಏರು ಪೇರು, ಹರುಷ ದೂರದ ಮೇರು ।।೧।।
ನೋವಿಗಿನ್ನೆಲ್ಲೂ ನೆಲೆಯೇ ಇಲ್ಲವೇ ಸಾವೇ ಇಲ್ಲವೇ
ಸಾವಿಗೂ ಇಲ್ಲಿಯೇ ಬರಬೇಕೆಂಬ ಹಾಹಾಕಾರವೇ
ಬಿಡದೀ ಯಾತನೆ, ಎದೆಯ ಬೇಗೆ ಬೇನೆ
ಹರುಷ ದೂರದ ಮೇರು
ಏರದೆನ್ನ ಬಾಳ ತೇರು, ಪಯಣ ಏರು ಪೇರು
ಪಯಣ ಏರು ಪೇರು ।।೨।।
No comments:
Post a Comment