Sunday, March 17, 2024

Kannu Kannu Kaletaga (ಕಣ್ಣು ಕಣ್ಣು ಕಲೆತಾಗ)

Movie: Kamanabillu (1983)

Singers: Dr. Rajkumar, Vani Jairam

Song link: Click Here


Kannu kannu kaletaaga (2) manavu uyyaleyagide tugi

Hrudaya bidalaare endide kugi

Kannu kannu kaletaga, manavu uyyaleyagide tugi

Hrudaya bidalaare endide kugi ||


Hosa sukha kaanutide, hosa kanasaagutide

Hosa bayakeyu mudutide

Hosa hosa bhavane, hosa hosa kalpane

Hosa lokake seleyutide

Aha eno helo aase

Aha eno kelo aase, naachike tadeyutide (2)

Kannu kannu kaletaaga, manavu uyyaleyagide tugi

Hrudaya bidalaare endide kugi ||


Mai navirelutide tanu hoovagutide, mana kaviteya haadutide

Ninna mana haadiruva, savi nudi saalugala, eeg kangale helutive

Ee maatu entha chenna, ee nota entha chenna

Ninna premake naa sote (2)

Kannu kannu kaletaaga, manavu uyyaleyagide tugi

Hrudaya bidalaare endide kugi ||


ಚಿತ್ರಗೀತೆ 


ಕಣ್ಣು ಕಣ್ಣು ಕಲೆತಾಗ (೨)

ಮನವು ಉಯ್ಯಾಲೆಯಾಗಿದೆ ತೂಗಿ 

ಹೃದಯ ಬಿಡಲಾರೆ ಎಂದಿದೆ ಕೂಗಿ ।।ಪ।।


ಹೊಸ ಸುಖ ಕಾಣುತಿದೆ, ಹೊಸ ಕನಸಾಗುತಿದೆ 

ಹೊಸ ಬಯಕೆಯು ಮೂಡುತಿದೆ 

ಹೊಸ ಹೊಸ ಭಾವನೆ, ಹೊಸ ಹೊಸ ಕಲ್ಪನೆ 

ಹೊಸ ಲೋಕಕೆ ಸೆಳೆಯುತಿದೆ 

ಆಹಾ ಏನೋ ಹೇಳೋ ಆಸೆ 

ಅಹಾ ಏನೋ ಕೇಳೋ ಆಸೆ, ನಾಚಿಕೆ ತಡೆಯುತಿದೆ (೨)

ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆಯಾಗಿದೆ ತೂಗಿ 

ಹೃದಯ ಬಿಡಲಾರೆ ಎಂದಿದೆ ಕೂಗಿ ।।೧।।


ಮೈ ನವಿರೇಳುತಿದೆ ತನು ಹೂವಾಗುತಿದೆ, ಮನ ಕವಿತೆಯ ಹಾಡುತಿದೆ 

ನಿನ್ನ ಮನ ಹಾಡಿರುವ, ಸವಿ ನುಡಿ ಸಾಲುಗಳ, ಈ ಕಂಗಳೆ ಹೇಳುತಿವೆ 

ಈ ಮಾತು ಎಂಥಾ ಚೆನ್ನ, ಈ ನೋಟ ಎಂಥ ಚೆನ್ನ 

ನಿನ್ನ ಪ್ರೇಮಕೆ ನಾ ಸೋತೆ (೨)

ಕಣ್ಣು ಕಣ್ಣು ಕಲೆತಾಗ, ಮನವು ಉಯ್ಯಾಲೆಯಾಗಿದೆ ತೂಗಿ 

ಹೃದಯ ಬಿಡಲಾರೆ ಎಂದಿದೆ ಕೂಗಿ ।।೨।।

                     


No comments:

Post a Comment