Movie: Manku Dinne (1968)
Singer: P B Srinivas
Song link: Click Here
Baa bega manamohini
Baa bega manamohini, ramani
Baa bega manamohini
Vaiyaravanu tori, nasu nageyanu beeri
Baa bega bali kamini.., baa bega manamohini ||
Modada tereyinda, chandira noduvante (2)
Bagila mareyinda, heegeke kaaduve..kaveri
Ninna aa vayasu neneyuta, haleyu chellata aaduta (2)
Kulukuta, balukuta, melu nade, nadeyuta
Tanuva, kunisi, manava, nalisi, oliyuta
Baayari, alla alla kaveri manamohini ||
Madanana baanavu, natide edeyali (2)
Manadanne ee nova, naa hege taalali.. kaveri
Viraha tapadali beyuta, pranaya bharadali kusiyuta (2)
Cheluvina, mogavanu, neneyuta, balalide
Manava, geluva, sukhava, padeva
Aaseyu bayari, kaveri manamohini
Baa bega manamohini, mohini, mohini ||
ಚಿತ್ರಗೀತೆ
ಬಾ ಬೇಗ ಮನಮೋಹಿನಿ
ಬಾ ಬೇಗ ಮನಮೋಹಿನಿ, ರಮಣಿ
ಬಾ ಬೇಗ ಮನಮೋಹಿನಿ
ವೈಯಾರವನು ತೋರಿ, ನಸು ನಗೆಯನು ಬೀರಿ
ಬಾ ಬೇಗ ಬಳಿ ಕಾಮಿನಿ, ಬಾ ಬೇಗ ಮನಮೋಹಿನಿ ।।ಪ।।
ಮೋಡದ ತೆರೆಯಿಂದ, ಚಂದಿರ ನೋಡುವಂತೆ (೨)
ಬಾಗಿಲ ಮರೆಯಿಂದ, ಹೀಗೇಕೆ ಕಾಡುವೆ .. ಕಾವೇರಿ
ನಿನ್ನ ಆ ವಯಸು ನೆನೆಯುತಾ, ಹಳೆಯು ಚೆಲ್ಲಾಟ ಆಡುತಾ (೨)
ಕುಲುಕುತ, ಬಳುಕುತ, ಮೆಲು ನಡೆ, ನಡೆಯುತ
ತನುವ, ಕುಣಿಸಿ, ಮನವ, ನಳಿಸಿ, ಒಲಿಯುತ
ಬಾಯಾರಿ, ಅಲ್ಲಾ ಅಲ್ಲಾ ಕಾವೇರಿ ಮನಮೋಹಿನಿ ।।೧।।
ಮದನನ ಬಾಣವು, ನಾಟಿದೆ ಎದೆಯಲಿ (೨)
ಮನದನ್ನೆ ಈ ನೋವ, ನಾ ಹೇಗೆ ತಾಳಲಿ .. ಕಾವೇರಿ
ವಿರಹ ತಪದಲಿ ಬೇಯುತಾ, ಪ್ರಣಯ ಭಾರದಲಿ ಕುಸಿಯುತಾ (೨)
ಚೆಲುವಿನ, ಮೊಗವನು, ನೆನೆಯುತ, ಬಳಲಿದೆ
ಮನವ, ಗೆಲುವ, ಸುಖವ, ಪಡೆವ
ಆಸೆಯು ಬಾಯಾರಿ, ಕಾವೇರಿ ಮನಮೋಹಿನಿ
ಬಾ ಬೇಗ ಮನಮೋಹಿನಿ, ಮೋಹಿನಿ, ಮೋಹಿನಿ ।।೨।।
No comments:
Post a Comment