Bhavageete
Sahitya: H S Venktesha Murthy
Song link: Click Here
Hucchu khodi manasu, adu hadinaarara vayasu
Maatu maatigeko nagu, maru ghaligeye mouna
Kannadi mundashtu hottu, bareyadiruva kavana
Hucchu khodi manasu, adu hadinaarara vayasu ||
Seragu teedidashtu sukku, hata maaduva kudalu
Niriyeko sariyaagadu, matte olage hodalu
Hucchu khodi manasu, adu hadinaarara vayasu ||
Kenne koncha kempayite, tutiya rangu hecche
Naguta avala chedisutide, gallada kari macche
Hucchu khodi manasu, adu hadinaarara vayasu ||
Baree hasiru bari hoovu, edeyoleshto hesaru
Yava maduve dibbanavo, summane nittusiru
Hucchu khodi manasu, adu hadinaarara vayasu ||
ಭಾವಗೀತೆ
ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು
ಮಾತು ಮಾತಿಗೇಕೊ ನಗು, ಮರು ಘಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೂತ್ತು, ಬರೆಯದಿರುವ ಕವನ
ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು ।।ಪ।।
ಸೆರಗು ತೀಡಿದಷ್ಟು ಸುಕ್ಕು, ಹಠ ಮಾಡುವ ಕೂದಲು
ನಿರಿಯೇಕೊ ಸರಿಯಾಗದು, ಮತ್ತೆ ಒಳಗೆ ಹೋದಳೂ
ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು ।।೧।।
ಕೆನ್ನೆ ಕೊಂಚ ಕೆಂಪಾಯಿತೆ, ತುಟಿಯ ರಂಗು ಹೆಚ್ಚೆ
ನಗುತ ಅವಳ ಛೇಡಿಸುತಿದೆ, ಗಲ್ಲದ ಕರಿ ಮಚ್ಚೆ
ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು ।।೨।।
ಬರೀ ಹಸಿರು ಬರಿ ಹೂವು, ಎದೆಯೊಳೆಷ್ಟೋ ಹೆಸರು
ಯಾವ ಮದುವೆ ದಿಬ್ಬಣವೋ, ಸುಮ್ಮನೆ ನಿಟ್ಟುಸಿರು
ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು ।।೩।।
No comments:
Post a Comment