ಪದ್ಯ
ಸಾಹಿತ್ಯ: ಅರುಣ ನರೇಂದ್ರ ಪಾಟೀಲ
ಕಾಡಿನ ರಾಜ ಸಿಂಹರಾಯನು
ಕಾಯಿಲೆ ಬಿದ್ದನು ಕೇಳಿ ಕಥೆ
ಅನ್ನವು ಸೇರದು ನೀರೂ ಸೇರದು
ರಾಜನಿಗಾಯಿತು ಬಹಳ ವ್ಯಥೆ
ಅಡವಿಯಲಿರುವ ವೈದ್ಯರನ್ನೆಲ್ಲ
ಸರದಿಯಂತೆ ಅವ ಕರೆಸಿದನು
ಡಾ. ಜೀಬ್ರಾ ರಾಜನ ಪರೀಕ್ಷಿಸಿ
ಬಾಯನು ತೆರೆಯಲು ಹೇಳಿದನು
ವೈದ್ಯರ ಆಜ್ಞೆಯ ಮೀರಿದ ಸಿಂಹ
ಬಾಯನು ತೆರೆದು ತೋರಿಸಿತು
"ದುರ್ವಾಸನೆಯ ಉಸಿರಿದೆ " ಎಂದು
ಡಾ. ಜೀಬ್ರಾ ಹೇಳಿದನು
ಹೀಗೆ ಹೇಳಲು ಎಂಥ ಧೈರ್ಯ
ಎನ್ನುತ ಸಿಂಹವು ಗರ್ಜಿಸಿತು
ಸತ್ಯವ ಹೇಳಿದ ವೈದ್ಯನನು
ಬೈದು ಹೊರಗಡೆ ಓಡಿಸಿತು
ಮುಂದಿನ ಸರದಿ ಡಾ. ಹೈನಾ
ಸಿಂಹದ ಬಾಗಿಲು ತಟ್ಟಿದಳು
ನಾಡಿಯ ಹಿಡಿದು ನೋಡಿದ ನಂತರ
ಬಾಯನು ತೆರೆಯಲು ಹೇಳಿದಳು
"ಎಂತಹ ಸುವಾಸನೆ ನಿಮ್ಮ ಉಸಿರಲಿ"
ಎನುತ ಮುಖವನು ನೋಡಿದಳು
ಸಿಂಹಕೆ ಕೋಪವು ನೆತ್ತಿಗೆ ಏರಿ
"ಮುಖಸ್ತುತಿ ಮಾಡುವಿ" ಎಂದಿತು
ಇರುವ ಸತ್ಯವ ಹೇಳಲು ಹೆದರಿದ
ಹೈನಾಳನು ಹೊರ ಹಾಕಿಸಿತು
ನಂತರ ಸರದಿ ಜಾಣವೈದ್ಯ ನರಿ
ಬಾಗಿಲು ತಟ್ಟಿ ಒಳಬಂದಿತು
ಸಾರ್ವಭೌಮರ ಉಪಚರಿಸುತ್ತ
ಬಾಯನು ತೆರೆಯಲು ವಿನಂತಿಸಿತು
"ಉಸಿರನು ಕುರಿತು ಏನು ಹೇಳುವಿರಿ"
ಎನ್ನುತ ಬಾಯನು ತೆರೆಯಿತು
ಚಾಣಾಕ್ಷ ನರಿಯು ತಕ್ಷಣ ಹೇಳಿತು
"ಶೀತದಿ ಮೂಗು ಕಟ್ಟಿದೆ ಒಡೆಯ
ವಾಸನೆ ಏನು ತಿಳಿಯದು ನನಗೆ"
ಎನ್ನುತ ಕೇಳಿತು ಕ್ಷಮೆಯನು
ಸಿಂಹದ ಕೋಪಕೆ ಬಲಿಯಾಗದೆ
ಪಾರಾಯಿತು ನರಿಯು
"ಉಪಾಯ ಬಲ್ಲವನಿಗೆ
ಅಪಾಯವಿಲ್ಲ" ಎನ್ನುವುದೆ ನೀತಿಯು
Padya
Kaadina raja simharayanu
Kayile biddanu keli kathe
Annavu seradu neeru seradu
Rajanigayitu bahala vyathe
Adaviyaliruva vaidyarannella
Saradiyante ava karesidanu
Dr. zebra raajana pareekshisi
Bayanu tegeyalu helidanu
Vaidyara aajneya meerada simha
Bayanu teredu torisitu
"Durvasaneya usiride" endu
Dr. zebra helidanu
Heege helalu entha dhairya
Ennuta simhavu garjisitu
Satyava helida vaidyananu
Baidu horagade odisitu
Mundina saradi Dr. hyena
Simhada bagilu tattidalu
Nadiya hididu nodida nantara
Bayanu tereyalu helidalu
"Entaha suvaasane nimma usirali"
Enuta mukhavanu nodidalu
Simhake kopavu nettige eri
"mukhastuti maaaduvi" enditu
Iruva satyava helalu hedarida
Hyenalanu hora haakisitu
Nantara saradi janavaidya nari
Baagilu tatti olabanditu
Saarvabhoumara upacharisutta
Bayanu tereyalu vinantisitu
"Usiranu kuritu enu heluviri"
Ennuta baayanu tereyitu.
Chanaksha nariyu takshana helitu
"Sheetadi mugu kattide odeya
Vasane enu tiliyadu nanage"
Ennuta kelitu kshameyanu
Simhada kopake baliyagade
Paarayitu nariyu
'Upaya ballavanige
Apaayavilla' ennuvude neetiyu
No comments:
Post a Comment