Movie: Beluvalada Madilalli (1975)
Singers: SPB, S Janaki
Song link: Click Here
Beluvalada madilallee.. Bevara hani biddaga
Beluvalada madilalli, bevara hani biddaga (2)
Ondondu bevara hani muttaitado
Raagiya jwalada teneyaitado
Ondondu bevara hani muttaitado
Ellara annada tuttaitado
Beluvalada madilalli, bevara hani biddaga ||
Dudimeli yavattu idabeku bhakti
Badatanava odsoke adu onde yukti
Dudiyore naadinaa.. (2) balu dodda shakti
Beleyora kaigale deshakke asti
Ee namma shaktilee..nambike.. ittaga (2)
Nav kaano kasavella rasavaitado
Nav kanda kanasella nanasaitado
Beluvalada madilalli, bevara hani biddaga ||
Uluvone lokakke bekaada geleya
Halligu dilligu kodtane beleya
Bhutayi bhanta..aa.. (2) ee negila nenta
Ivnindle aliyodu hasivina sankta
Ee bhanta dudidaaga.. bhudevi nagutaale (2)
Aavagle nelavella hasiraitado
Ellara baalina usiraitado
Beluvalada madilalli, bevara hani biddaga ||
ಚಿತ್ರಗೀತೆ
ಬೆಳುವಲದ ಮಡಿಲಲ್ಲೀ .. ಬೆವರ ಹನಿ ಬಿದ್ದಾಗ ..
ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ (೨)
ಒಂದೊಂದು ಬೆವರ ಹನಿ ಮುತ್ತಾಯ್ತದೋ
ರಾಗಿಯ ಜ್ವಾಳದ ತೆನೆಯಾಯ್ತದೋ
ಒಂದೊಂದು ಬೆವರ ಹನಿ ಮುತ್ತಾಯ್ತದೋ
ಎಲ್ಲಾರ ಅನ್ನದ ತುತ್ತಾಯ್ತದೋ
ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ ।।ಪ।।
ದುಡಿಮೇಲಿ ಯಾವತ್ತು ಇಡಬೇಕು ಭಕ್ತಿ
ಬಡತನವ ಓಡ್ಸೋಕೆ ಅದು ಒಂದೇ ಯುಕ್ತಿ
ದುಡಿಯೋರೆ ನಾಡಿನಾ .. (೨) ಬಲು ದೊಡ್ಡ ಶಕ್ತಿ
ಬೆಳೆಯೋರ ಕೈಗಳೆ ದೇಶಕ್ಕೆ ಅಸ್ತಿ
ಈ ನಮ್ಮ ಶಕ್ತೀಲೀ .. ನಂಬಿಕೆ ಇಟ್ಟಾಗ .. (೨)
ನಾವ್ ಕಾಣೋ ಕಸವೆಲ್ಲ ರಸವಾಯ್ತದೋ
ನಾವ್ ಕಂಡ ಕನಸೆಲ್ಲ ನನಸಾಯ್ತದೋ
ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ ।।೧।।
ಉಳುವೋನೆ ಲೋಕಕ್ಕೆ ಬೇಕಾದ ಗೆಳೆಯ
ಹಳ್ಳಿಗೂ ದಿಲ್ಲಿಗೂ ಕೊಡ್ತಾನೆ ಬೆಳೆಯ
ಭೂತಾಯಿ ಭಂಟ .. ಆ .. (೨) ಈ ನೇಗಿಲ ನೆಂಟ
ಇವ್ನಿ೦ದ್ಲೇ ಅಳಿಯೋದು ಹಸಿವಿನಾ ಸಂಕ್ಟ
ಈ ಭಂಟ ದುಡಿದಾಗ .. ಭೂದೇವಿ ನಗುತಾಳೆ (೨)
ಆವಾಗ್ಲೆ ನೆಲವೆಲ್ಲ ಹಸಿರಾಯ್ತದೋ
ಎಲ್ಲಾರ ಬಾಳಿನ ಉಸಿರಾಯ್ತದೋ
ಬೆಳುವಲದ ಮಡಿಲಲ್ಲಿ, ಬೆವರ ಹನಿ ಬಿದ್ದಾಗ ।।೨।।
No comments:
Post a Comment