Thursday, June 15, 2023

Kannada Taayige Maniva Nav (ಕನ್ನಡ ತಾಯಿಗೆ ಮಣಿವ ನಾವ್)

Nadageete

Sahitya: M V Seetaramayya

Song link: Click Here


Kannada taayige maniva nav

Kannadigarendu kuniva

Bharateeya swatantrya bhagyadola

Paara baluvaliya hondi naliyutiha ||


Giripankti tevara sundara vanavo

Taruraaji tavara chelu chandanavo

Parimala pottiha paduva pavanavo

Nere kan managaligivu outanavo ||


Shileyalla kalee ee nadinali

Kaleyella cheluve honnadinali

Cheluve olavina nadeyali nudiyali

Olave mantravi dharmada gudiyali ||


Kaleya cheluva edeyolava needuta

Chalavanulidu sodarara kooduta

Balava galisi taayanu kapaduta

Geluvu mangalavanilege paaduta ||


ನಾಡಗೀತೆ 


ಕನ್ನಡ  ತಾಯಿಗೆ ಮಣಿವ ನಾವ್ 

ಕನ್ನಡಿಗರೆಂದು ಕುಣಿವ 

ಭಾರತೀಯ ಸ್ವಾತಂತ್ರ್ಯ ಭಾಗ್ಯದೊಳ

ಪಾರ ಬಳುವಳಿಯ ಹೊಂದಿ ನಲಿಯುತಿಹ ।।ಪ।।


ಗಿರಿಪಂಕ್ತಿ ತೆವರ ಸುಂದರ ವನವೊ 

ತರುತಾಜಿ ತವರ ಚೆಲು ಚಂದನವೊ 

ಪರಿಮಳ ಪೊತ್ತಿಹ ಪಡುವ ಪವನವೊ 

ನೆರೆ ಕಣ್ ಮನಗಳಿಗಿವು ಔತನವೊ ।।೧।।


ಶಿಲೆಯಲ್ಲ ಕಲೆಯೆ ಈ ನಾಡಿನಲಿ 

ಕಲೆಯೆಲ್ಲ ಚೆಲುವೆ ಹೊನ್ನಾಡಿನಲಿ 

ಚೆಲುವೆ ಒಲವಿನಾ ನಡೆಯಲಿ ನುಡಿಯಲಿ 

ಒಲವೆ ಮಂತ್ರವೀ ಧರ್ಮದ ಗುಡಿಯಲಿ ।।೨।।


ಕಲೆಯ ಚೆಲುವ ಎದೆಯೊಲವ ನೀಡುತ 

ಛಲವನುಳಿದು ಸೋದರರ ಕೂಡುತ 

ಬಲವ ಗಳಿಸಿ ತಾಯನು ಕಾಪಾಡುತ 

ಗೆಲುವು ಮಂಗಳವನಿಳೆಗೆ  ಪಾಡುತ ।।೩।।



No comments:

Post a Comment