Bhaktigeete
Bala gajanana shankara tanayana
Tomtana tomtana nartana
Dheem dheem dheem dheem tananana ||
Deva manavara moulyada chintana
Satya dharmagala vijayada outana
Ekadantana parama puneetana
Modaka hastana tomtana nartana ||
Gejjeya kalgala hejjeya jhanana
Narada nudisire tambura vaadana
Shankara parvati shanmukha sannuta
Kunidire tanivudu suragana hrunmana ||
Veena paaniya veeneya sarigama
Mrudanga maddale jagate sangama
Bhavaikyateya bhava samaagama
Mangala moorthiya tomtana nartana ||
ಭಕ್ತಿಗೀತೆ
ಬಾಲ ಗಜಾನನ ಶಂಕರ ತನಯನ
ತೋ೦ತನ ತೋ೦ತನ ನರ್ತನ
ಧೀ೦ ಧೀ೦ ಧೀ೦ ಧೀ೦ ತನನನ ।।ಪ।।
ದೇವ ಮಾನವರ ಮೌಲ್ಯದ ಚಿಂತನ
ಸತ್ಯಧರ್ಮಗಳ ವಿಜಯದ ಔತಣ
ಏಕದಂತನ ಪರಮ ಪುನೀತನ
ಮೋದಕ ಹಸ್ತನ ತೋ೦ತನ ನರ್ತನ ।।೧।।
ಗೆಜ್ಜೆಯ ಕಾಲ್ಗಳ ಹೆಜ್ಜೆಯ ಝನನ
ನಾರದ ನುಡಿಸಿರೆ ತಂಬೂರ ವಾದನ
ಶಂಕರ ಪಾರ್ವತಿ ಷಣ್ಮುಖ ಸನ್ನುತ
ಕುಣಿದರೆ ತಣಿವುದು ಸುರಗಣ ಹೃನ್ಮನ ।।೨।।
ವೀಣಾ ಪಾಣಿಯ ವೀಣೆಯ ಸರಿಗಮ
ಮೃದಂಗ ಮದ್ದಳೆ ಜಾಗಟೆ ಸಂಗಮ
ಭಾವೈಕ್ಯತೆಯ ಭಾವ ಸಮಾಗಮ
ಮಂಗಳ ಮೂರ್ತಿಯ ತೋ೦ತನ ನರ್ತನ ।।೩।।

No comments:
Post a Comment