Movie: Kasturi Nivasa (1971)
Singer: P B Srinivas
Song link: Click Here
Aadona neenu nanu
Enna aase tare neenu
Nodi ninna anda chanda
Chandamaama nachi ninda |
Aadona neenu nanu
Enna aase tare neenu
Nodi ninna ee anda chanda
Chandamaama nachi ninda
Aa Chandamaama nachi ninda ||
Kanna gombe neenade, ninna kaigombe nanaade
Ninnanda muddadalende, bandide kannalli nidde (2)
Ennede nee meeti bande, balina bhandana nee tande ||
Illi cheluvaagi naguve, alli karulanne midive
Haagu heegu seleve, na ninna kaigombe allave (2)
Nee enna usiraade maguve, devara ninnalli kaanuve ||
ಚಿತ್ರಗೀತೆ
ಆಡೋಣ ನೀನು ನಾನು
ಎನ್ನ ಆಸೆ ತಾರೆ ನೀನು
ನೋಡಿ ನಿನ್ನ ಅಂದ ಚೆಂದ
ಚಂದಮಾಮ ನಾಚಿ ನಿಂದ ।
ಆಡೋಣ ನೀನು ನಾನು
ಎನ್ನ ಆಸೆ ತಾರೆ ನೀನು
ನೋಡಿ ನಿನ್ನ ಈ ಅಂದ ಚೆಂದ
ಚಂದಮಾಮ ನಾಚಿ ನಿಂದ
ಆ ಚಂದಮಾಮ ನಾಚಿ ನಿಂದ ।।
ಕಣ್ಣ ಗೊಂಬೆ ನೀನಾದೆ, ನಿನ್ನ ಕೈಗೊಂಬೆ ನಾನಾದೆ
ನಿನ್ನಂದ ಮುದ್ದಾಡಲೆಂದೆ, ಬಂದಿದೆ ಕಣ್ಣಲ್ಲಿ ನಿದ್ದೆ (೨)
ಎನ್ನೆದೆ ನೀ ಮೀಟಿ ಬಂದೆ, ಬಾಳಿನ ಬಂಧನ ನೀ ತಂದೆ ।।೧।।
ಇಲ್ಲಿ ಚೆಲುವಾಗಿ ನಗುವೆ, ಅಲ್ಲಿ ಕರುಳನ್ನೆ ಮಿಡಿವೆ
ಹಾಗೂ ಹೀಗೂ ಸೆಳೆವೆ, ನಾ ನಿನ್ನ ಕೈಗೊಂಬೆ ಅಲ್ಲವೆ (೨)
ನೀ ಎನ್ನ ಉಸಿರಾದೆ ಮಗುವೆ, ದೇವರ ನಿನ್ನಲ್ಲಿ ಕಾಣುವೆ ।।೨।।

No comments:
Post a Comment