Bhavageete
Sahitya: Chennaveera Kanavi
Song link: Click Here
Hoovu horaluvavu suryana kadege
Namma daari bari chandranavarege
Irulina odalige, durada kadalige
Mulugidante, dina belagidante
Horabaruvanu kusina haage !
Jagada museyali karagisi biduvanu
Ella bageya saraku;
Adake adara guna doshagalantisi
Bidisibitta todaku!
Gidadinduduruva elegaligu muda
Chiguruvaagalu onde hada;
Nelada odalinolagenu nadevudo
Elli kulitihanu kalavida!
Bisila dhageya basirindale sulivudu
Melu tangaaliyu balige;
Sahisikonda sankatavanu sosalu
Bande baruvuda galige!
Sahaja nadedaru bhumiya layadali
Padagalanirisida haage;
Vishwada rachaneya holahinalli
Kangolisitu kaviteyu heege!
ಭಾವಗೀತೆ
ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ, ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ !
ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು;
ಅದಕೆ ಅದರ ಗುಣ ದೋಷಗಳಂಟಿಸಿ
ಬಿಡಿಸಿಬಿಟ್ಟ ತೊಡಕು !
ಗಿಡದಿಂದುದುರುವ ಎಲೆಗಳಿಗೂ ಮುದ
ಚಿಗುರುವಾಗಲೂ ಒಂದೇ ಹದ;
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನು ಕಲಾವಿದ !
ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ;
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾ ಗಳಿಗೆ !
ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ;
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ !
No comments:
Post a Comment