Movie: Solillada Saradaara (1992)
Singer: SPB
Song link: Click Here
Kannadaa.. romanchanavee kanadaa..
Kasturi nudiyidu, karunadu mannidu
Chintisu, vandisu, pujisu.. pujisu..||
Ee kannada mannanu marideda, o abhimaani, o abhimaani
Ee mannina hennanu jaribeda, o abhimaani, o abhimaani
Susamskruta chariteya tainaadu, mahonnata kalegala nelebeedu
Kedisadiru ee hesara, ee hesara ||
Haadagali, gudaagali, naadagali
Kattoke naanaa dina, kedavoke moore dina
Harasidaru munigalu, galisidaru kaligalu
Nettarali necchina, ee necchina samrajyava
Haadidaru kavigalu, karagidavu shilegalu
Tumbidaru edeyali, sirigannada abhimaanava
Kannadaa..romanchanavee kannadaa..haadisu, kelisu, preetisu ||
Jnana ide, chinna ide, kaveri ide
Badatanave melagide, namma tanave mankagide
Yaariharu nimmali, madakariya nayaka
Kecchedeya ecchama, ranadheeraru, nudidaasaru
Ulidihude nimmali, housalara kidigalu
Honna male surisida, arirayara tolbalagalu
Eliri..eliri, ee prarthaneya keliri
Kaliyiri, dudiyiri, ulisiri ||
ಚಿತ್ರಗೀತೆ
ಕನ್ನಡಾ .. ರೋಮಾಂಚನವೀ ಕನ್ನಡಾ ..
ಕಸ್ತೂರಿ ನುಡಿಯಿದು, ಕರುನಾಡು ಮಣ್ಣಿದು
ಚಿಂತಿಸು, ವಂದಿಸು, ಪೂಜಿಸೂ .. ಪೂಜಿಸೂ .. ।।
ಈ ಕನ್ನಡ ಮಣ್ಣನು ಮರೀಬೇಡ, ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ, ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು, ಮಹೋನ್ನತ ಕಲಿಗಳ ನೆಲೆಬೀಡು
ಕೆಡಿಸದಿರು ಈ ಹೆಸರಾ, ಈ ಹೆಸರಾ ।।ಪ।।
ಹಾಡಾಗಲಿ ಗೂಡಾಗಲಿ ನಾಡಾಗಲಿ
ಕಟ್ಟೋಕೆ ನಾನಾ ದಿನಾ, ಕೆಡವೋಕೆ ಮೂರೇ ದಿನ
ಹರಸಿದರು ಮುನಿಗಳು, ಗಳಿಸಿದರು ಕಲಿಗಳು
ನೆತ್ತರಲಿ ನೆಚ್ಚಿನ, ಈ ನೆಚ್ಚಿನ ಸಾಮ್ರಾಜ್ಯವಾ
ಹಾಡಿದರು ಕವಿಗಳು, ಕರಗಿದವು ಶಿಲೆಗಳು
ತುಂಬಿದರು ಎದೆಯಲಿ, ಸಿರಿಗನ್ನಡ ಅಭಿಮಾನವ
ಕನ್ನಡಾ .. ರೋಮಾಂಚನವೀ ಕನ್ನಡಾ ..ಹಾಡಿಸು, ಕೇಳಿಸು, ಪ್ರೀತಿಸು ।।೧।।
ಜ್ಞಾನ ಇದೆ, ಚಿನ್ನ ಇದೆ, ಕಾವೇರಿ ಇದೆ
ಬಡತನವೇ ಮೇಲಾಗಿದೇ, ನಮ್ಮ ತನವೇ ಮಂಕಾಗಿದೆ
ಯಾರಿಹರು ನಿಮ್ಮಲಿ, ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ, ರಣಧೀರರು, ನುಡಿದಾಸರು
ಉಳಿದಿಹುದೇ ನಿಮ್ಮಲಿ, ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ, ಅರಿರಾಯರ ತೋಳ್ಬಲಗಳು
ಎಳಿರೀ .. ಎಳಿರೀ .. ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ, ದುಡಿಯಿರಿ, ಉಳಿಸಿರಿ ।।೨।।
No comments:
Post a Comment