Movie: Kappu Bilupu (1969)
Singer: P Susheela
Song link: Click Here
Ee chendada maneyalli, srigandhada gudiyalli,
Aanandada hole, anuraagada male,
Endendu chimmutirali, ee chendada maneyalli ||
Nutana nandana nalinalidaadali (2)
Preetiya sumavu aralutalirali
Shantiya sourabha susutalirali (2)
Jnanada jyothiyu belagirali ||
Ee mane premada mandiravaagali (2)
Savi maatugala tavaruraagali
Siridevateyu kunikunidaadali (2)
Arishina kunkuma nagunagutirali (2) ||
ಚಿತ್ರಗೀತೆ
ಈ ಚೆಂದದ ಮನೆಯಲ್ಲಿ, ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ, ಅನುರಾಗದ ಮಳೆ
ಎಂದೆಂದೂ ಚಿಮ್ಮುತಿರಲಿ, ಈ ಚೆಂದದ ಮನೆಯಲ್ಲಿ ।।ಪ।।
ನೂತನ ನಂದನ ನಲಿನಲಿದಾಡಲಿ (೨)
ಪ್ರೀತಿಯ ಸುಮವೂ ಅರಳುತಲಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ಜ್ಞಾನದ ಜ್ಯೋತಿಯು ಬೆಳಗಿರಲಿ ।।೧।।
ಈ ಮನೆ ಪ್ರೇಮದ ಮಂದಿರವಾಗಲಿ (೨)
ಸವಿ ಮಾತುಗಳ ತವರೂರಾಗಲಿ
ಸಿರಿದೇವತೆಯು ಕುಣಿಕುಣಿದಾಡಲಿ (೨)
ಅರಿಶಿನ ಕುಂಕುಮ ನಗುನಗುತಿರಲಿ ।।೨।।

No comments:
Post a Comment