Monday, August 19, 2024

Aaseya Bhava (ಆಸೆಯ ಭಾವ)

Movie: Mangalya Bhagya (1976)

Singer: SPB

Click Here: Click Here


Aaseya bhava, olavina jeeva, ondagi bandide (2)

Hosa bage gungina nishe taaneridantide

Aaseya bhava, olavina jeeva, ondagi bandide ||


Kaamana billinali kaanada kantiyanu

Chimmisi hommuva cheluvike illide

Premada seemeyali sourabha tumbida

Baadada hoovina kiru nage chellide

Baalina bhagya nouke teera seri teli telide

Manasina roopa mangala deepa aananda tandide

Hosa bage gungina nishe taaneridantide

Aaseya bhava, olavina jeeva, ondagi bandide ||


Kannina sanneyali kavyava nee bareve

Hejjeya bhavake hamsave nachide

Gaaliya beesinali gaanavu neenade

Nannede spandana ninnade chetana

Premada leelealli jeeva bhava natyavaadide

Jeevana jyothi, needuta shanti, vaibhoga tandide

Hosa bage gungina nishe taaneridantide

Aaseya bhava, olavina jeeva, ondagi bandide ||


Doorada hrudayagala sanihada begeyali

Virahada vedane mugilanu seride 

Teerada dahadali meerida kaatarake

Mereye illada tuditavu tumbide

Yavudo modiyalli lokavella tugi saagide

Premada jodi baalali kudi haayagi haadide

Hosa bage gungina nishe taaneridantide

Aaseya bhava, olavina jeeva, ondagi bandide ||


ಚಿತ್ರಗೀತೆ 


ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ (೨)

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ 

ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ ।।ಪ।।


ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು

 ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ 

ಪ್ರೇಮದ ಸೀಮೆಯಲಿ ಸೌರಭ ತುಂಬಿದ 

ಬಾಡದ ಹೂವಿನ ಕಿರು ನಗೆ ಚೆಲ್ಲಿದೆ 

ಬಾಳಿನ ಭಾಗ್ಯ ನೌಕೆ ತೀರ ಸೇರಿ ತೇಲಿ ತೇಲಿದೆ 

ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ 

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ 

ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ ।।೧।।


ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆವೆ  

ಹೆಜ್ಜೆಯ ಭಾವಕೆ ಹಂಸವೆ ನಾಚಿದೆ 

ಗಾಳಿಯ ಬೀಸಿನಲಿ ಗಾನವು ನೀನಾದೆ 

ನನ್ನೆದೆ ಸ್ಪಂದನ ನಿನ್ನದೇ ಚೇತನ 

ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ 

ಜೀವನ ಜ್ಯೋತಿ, ನೀಡುತ ಶಾಂತಿ, ವೈಭೋಗ ತಂದಿದೆ 

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ 

ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ ।।೨।।


ದೂರದ ಹೃದಯಗಳ ಸನಿಹದ ಬೇಗೆಯಲಿ 

ವಿರಹದ ವೇದನೆ ಮುಗಿಲನು ಸೇರಿದೆ 

ತೀರದ ದಾಹದಲಿ ಮೀರಿದ ಕಾತರಕೆ 

ಮೇರೆಯ ಇಲ್ಲದಾ ತುಡಿತವು ತುಂಬಿದೆ 

ಯಾವುದೋ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ 

ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ 

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ 

ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ ।।೨।।

                        

No comments:

Post a Comment