Sunday, August 11, 2024

Kande Hariya Kande (ಕಂಡೆ ಹರಿಯ ಕಂಡೆ)

Movie: Bhakta Kumbara (1974)

Singer: P B Srinivas

Song link: Click Here


Kande hariya kande, devaadi deva, danujadi vandya

Dharaneeshana, divya charana kamala yugava, kande hariya kande ||


Pavanavayitu kulakotigalu, putidu hodavu paritapagalu..aa..aa (2)

Berenu bekilla, saku iduve ananta bhagya

Kande hariya kande ||


Ee jeeva jotheyalli paramatma kaletu (2)

Olagu horagu belaguva haage

Sakhiyara odane kuniyuva hariya

Charana kinkini naadada impu

Raaga bhavagalu besediha sompu, mandahasadali mindalaasyadali

Kunidu kuniso kalaapavanne, kande hariya kande ||


Asamaana kalegaara ivanamma vittala

Rasavanta gunavanta shrungra lola

Yogiyo bhoiyo ballavarilla

Rasika rangana ananta pitana, bhava bhavagala olagina marma

Tilidu naanindu talede aananda, pranava bereta vihaaravanne

Kande hariya kande ||


ಚಿತ್ರಗೀತೆ 


ಕಂಡೆ ಹರಿಯ ಕಂಡೆ, ದೇವಾದಿ ದೇವ, ದನುಜಾದಿ ವಂದ್ಯ 

ಧರಣೀಶನ, ದಿವ್ಯ ಚರಣ ಕಮಲ ಯುಗವ 

ಕಂಡೆ ಹರಿಯ ಕಂಡೆ ।।ಪ।।


ಪಾವನವಾಯಿತು ಕುಲಕೋಟಿಗಳು 

ಪುಟಿದು ಹೋದವು ಪರಿತಾಪಗಳೂ .. ಆ .. ಆ (೨)

ಬೇರೇನೂ ಬೇಕಿಲ್ಲ, ಸಾಕು ಇದುವೆ ಅನಂತ ಭಾಗ್ಯ 

ಕಂಡೆ ಹರಿಯ ಕಂಡೆ ।।


ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು  (೨)

ಒಳಗೂ ಹೊರಗೂ ಬೆಳಗುವ ಹಾಗೆ 

ಸಖಿಯರ ಒಡನೆ ಕುಣಿಯುವ ಹರಿಯ 

ಚರಣ ಕಿಂಕಿಣಿ ನಾದದ ಇಂಪು 

ರಾಗ ಭಾವಗಳು ಬೆಸೆದಿಹ ಸೊಂಪು, ಮಂದಹಾಸದಲಿ ಮಿಂದ ಲಾಸ್ಯದಲಿ 

ಕುಣಿದು ಕುಣಿಸೊ ಕಲಾಪವನ್ನೆ, ಕಂಡೆ ಹರಿಯ ಕಂಡೆ ।।೧।।


ಅಸಮಾನ ಕಲೆಗಾರ ಇವನಮ್ಮ ವಿಠ್ಠಲ 

ರಸವಂತ ಗುಣವಂತ ಶೃಂಗಾರ ಲೋಲ 

ಯೋಗಿಯೊ ಭೋಗಿಯೋ ಬಲ್ಲವರಿಲ್ಲ 

ರಸಿಕ ರಂಗನ ಅನಂತ ಪಿತನ, ಭಾವ ಭಾವಗಳ ಒಳಗಿನ ಮರ್ಮ 

ತಿಳಿದು ನಾನಿಂದು ತಳೆದೆ ಆನಂದ, ಪ್ರಣವ ಬೆರೆತ ವಿಹಾರವನ್ನೆ

ಕಂಡೆ ಹರಿಯ ಕಂಡೆ ।।೨।।

                       



No comments:

Post a Comment