Thursday, August 1, 2024

Hendatiyobbalu Maneyolagiddare (ಹೆಂಡತಿಯೊಬ್ಬಳು ಮನೆಯೊಳಗಿದ್ದರೆ)

Bhavageete

Sahitya: K S Narasimha Swamy

Song link: Click Here


Hendatiyobbalu maneyolagiddare

Nanagade koti rupayi!

Hendatiyobbalu hattiraviddare

Nanu obba sipayi!


Hendatiyobbalu maneyolagiddare

Hunnime, holige, deepa

Hendati tavarige horaduvenendare

Nanagillada kopa!

Kaihididavau kaibidadavalu

Maadida adegeya chenda

Nagara kucchina nidu jadeyavalu

Eeke bandudu ellinda?


Kabbiganurige darigaliddare

Kanase irabeku

Alliya doretana siguvantiddare

Nanage sigabeku

Tareya belakina tumbida sabheyali

Sundari meredalu

Nannodanavalu simhasanadali

Mellane nakkalu!


Chadiranurina aramaneyinda

Bandavareegelli?

Belliya koteya bagilininda

Bandavareegelli?

Hendatiyondige badatana, doretana

Enu bhayavilla

Hendatiyolumeya bhagyavanariyada

Gandige jayavilla!


ಭಾವಗೀತೆ 


ಹೆಂಡತಿಯೊಬ್ಬಳು ಮನೆಯೊಳಗಿದ್ದರೆ 

ನನಗದೇ ಕೋಟಿ ರೂಪಾಯಿ !

ಹೆಂಡತಿಯೊಬ್ಬಳು ಹತ್ತಿರವಿದ್ದರೆ 

ನಾನೂ ಒಬ್ಬ ಸಿಪಾಯಿ !


ಹೆಂಡತಿಯೊಬ್ಬಳು ಮನೆಯೊಳಗಿದ್ದರೆ 

ಹುಣ್ಣಿಮೆ, ಹೋಳಿಗೆ, ದೀಪ 

ಹೆಂಡತಿ ತವರಿಗೆ ಹೊರಡುವೆನೆಂದರೆ 

ನನಗಿಲ್ಲದ ಕೋಪ 

ಕೈ ಹಿಡಿದವಳು ಕೈ ಬಿಡದವಳು 

ಮಾಡಿದ ಅಡಿಗೆಯ ಚೆಂದ 

ನಗರ ಕುಚ್ಚಿನ ನಿಡುಜಡೆಯವಳು 

ಈಕೆ ಬಂದುದು ಎಲ್ಲಿಂದ ?


ಕಬ್ಬಿಗನೂರಿಗೆ ದಾರಿಗಳಿದ್ದರೆ 

ಕನಸೇ ಇರಬೇಕು 

ಅಲ್ಲಿಯ ದೊರೆತನ ಸಿಗುವಂತಿದ್ದರೆ 

ನನಗೇ ಸಿಗಬೇಕು 

ತಾರೆಯ ಬೆಳಕಿನ ತುಂಬಿದ ಸಭೆಯಲಿ 

ಸುಂದರಿ ಮೆರೆದಾಳು 

ನನ್ನೊಡನವಳು ಸಿಂಹಾಸನದಲಿ 

ಮೆಲ್ಲನೆ  ನಕ್ಕಾಳು !


ಚಂದಿರನೂರಿನ ಅರಮನೆಯಿಂದ 

ಬಂದವರೀಗೆಲ್ಲಿ ?

ಬೆಳ್ಳಿಯ ಕೋಟೆಯ ಬಾಗಿಲಿನಿಂದ 

ಬಂದವರೀಗೆಲ್ಲಿ ?

ಹೆಂಡತಿಯೊಂದಿಗೆ ಬಡತನ, ದೊರೆತನ 

ಏನೂ ಭಯವಿಲ್ಲ 

ಹೆಂಡತಿಯೊಲುಮೆಯ ಭಾಗ್ಯವನರಿಯದ 

ಗಂಡಿಗೆ ಜಯವಿಲ್ಲ !

         

No comments:

Post a Comment