ಪದ್ಯ
ಸಾಹಿತ್ಯ : ಸಿದ್ದಯ್ಯ ಪುರಾಣಿಕ
ಹೆಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ
ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ
ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ
ಸಾರುತಿದೆ ಸೃಷ್ಟಿಯಿದು ಸವಿಯಾಗಿ ನಿಂದು
ಸವಿಯಾಗು ಸವಿಯಾಗು ಸವಿಯಾಗು ! ಎಂದು.
ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ
ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ
ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ
ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು
ಛವಿಯಾಗು ಛವಿಯಾಗು ಛವಿಯಾಗು ! ಎಂದು.
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ! ಎಂದು.
Padya
Henninali benneyali kenemosaru haalinali
Kandadali jeninali rasagabbu baaleyali
Elaneeru holeneeru haldeneya kaalinali
Saarutide srushtiyidu saviyagi nindu
Saviyagu saviyagu saviyagu ! endu.
Taareyali chandranali suryanali rannadali
Kanchinali minchinali muttinali chinnadali
Jyothiyali nayanadali usheya hombannadali
Saarutide srushtiyidu chaviyagi nindu
Chaviyagu chaviyagu chaviyagu ! endu.
Shabdadali saviyagi arthadali belakagi
Baala bhavyategilli belaku savi sakagi
Baaluveya savibelaka bareyuvava bekagi
Saarutide srushtiyidu chaviyagi nindu
Kaviyagu kaviyagu kaviyagu ! endu.

No comments:
Post a Comment