Thursday, January 15, 2026

Sanjemale (ಸಂಜೆಮಳೆ)

ಪದ್ಯ 

ಸಾಹಿತ್ಯ : ಜಿ.  ವರದರಾಜರಾವ್ 


ಒಂದು ಚಣದ ಸಂಜೆ ಮಳೆ 

ಬೀಳಲಿಂದು ತೋಯಲಿಳೆ 

ಹೂವ ಬಿಸಿಲು ಬೆಳಕು ಗೊಳೆ 

ಏನು ಆನಂದವೋ, ಏನು ಆನಂದವೋ


ಕಿರಿಯ ಹಿರಿಯ ಮುಗಿಲ ಪಡೆ 

ನೀರನೆರೆಯೆ ಎಲ್ಲ ಕಡೆ 

ಬಲು ಪವಿತ್ರ ವಾಗಲೆಡೆ 

ಏನು ಆನಂದವೋ, ಏನು ಆನಂದವೋ


ಮಿನುಗೆ, ಜಿನುಗೆ, ಬೆಳಗೆ ಗಿರಿ 

ಉರುಳಿ ಹೊರಳಿ ನೊರೆಯ ಝರಿ 

ನಲಿಯೆ ಮೆರೆಯೆ ಹಸುರ ಸಿರಿ 

ಏನು ಆನಂದವೋ, ಏನು ಆನಂದವೋ


ಬೆಳೆಯಲೆಳೆಯ ಮನದ ತೆನೆ 

ಪೂತು ಚಿಗಿಯಲದರ ಕೊನೆ 

ಅರಳುತಿಹುದು ಬಯಕೆ ನನೆ 

ಏನು ಆನಂದವೋ, ಏನು ಆನಂದವೋ


ಗಾಳೆ ಮೆಲ್ಲನೆ ಸುಳಿಯುತಿರೆ 

ಮಳೆಯ ಬಿಲ್ಲು ರಂಜಿಸಿರೆ 

ಮರಳಿ ವಿಹಗ ನುತಿಸುತಿರೆ 

ಏನು ಆನಂದವೋ, ಏನು ಆನಂದವೋ


ಬುವಿಯು ಬಾನು ಮುದದ ನೆಲೆ 

ಮೂಡಿ ಬರುವ ವಿವಿಧ ಕಲೆ 

ನನ್ನ ಮನವ ಪಿಡಿವ ಬಲೆ 

ಏನು ಆನಂದವೋ, ಏನು ಆನಂದವೋ


Padya


Ondu chanada sanjemale

Beelalindu toyalile

Hoova bisilu belaku gole

Enu aanandavo, enu aanandavo.


Kiriya hiriya mugila pade

Neera nereya ella kade

Balu pavitravaagalede

Enu aanandavo, enu aanandavo.


Minuge, jinuge, belage giri

Uruli horali noreye jhari

Naliye mereye hasura siri

Enu aanandavo, enu aanandavo.


Beleyaleleya manada tene

Putu chigiyaladara kone

Aralutihudu bayake nane

Enu aanandavo, enu aanandavo.


Gaale mellane suliyutire

Maleya billu ranjisire

Marali vihaga nutisutire

Enu aanandavo, enu aanandavo.


Buviyu baanu mudada nele

Moodi baruva vividha kale

Nanna manava pidiva bale

Enu aanandavo, enu aanandavo.

         

No comments:

Post a Comment