Thursday, October 9, 2025

Baana Kusuma (ಬಾನ ಕುಸುಮ)

 ಪದ್ಯ 

ಸಾಹಿತ್ಯ: ಫ. ಗು. ಸಿದ್ದಾಪೂರ 


ಇರುಳಿನ ಕೆಸರಲಿ ಅರಳಿದ ತಾವರೆ 

ಚಂದಿರ ನಗುತಿಹನು. 

ಮಜ್ಜಿಗೆಯೊಳಗಿನ ಬೆಣ್ಣೆಯ ಹಾಗೆ 

ತೇಲುತ ಬರುತಿಹನು. 


ತಾರಾ ಬಳಗದಿ ತಾನೊಂದಾಗಿ 

ಬಾನಲಿ ನಲಿಯುವನು. 

ಓಡುವ ಮೋಡದ ಹಿಂಡೊಳಗಾಡುತ 

ಮಿರಿ ಮಿರಿ ಮಿನುಗುವನು. 


ಹಾಲಿನ ಬೆಳಕನು ಚಲ್ಲುತ ಧರೆಗೆ 

ತಂಪನು ಹರಡುವನು. 

ಆಡುವ ಮಕ್ಕಳ ದೇಹಕೆ ಚೇತನ 

ಚಂದಿರ ನೀಡುವನು. 


ರಂಪವ ಮಾಡುವ ಕಂದನ ರಮಿಸಲು 

ಅಮ್ಮನು ತೋರುವಳು. 

ಚಂದಿರ ಕರೆಯುತ ಹಾಡನು ಹಾಡಿ 

ಅನ್ನವನುಣಿಸುವಳು. 


ತಿಂಗಳ ಬೆಳಕಲಿ ಅಂಗಳ ತುಂಬಾ 

ಎಳೆಯರು ಸೇರುವರು. 

ವಿಧವಿಧ ಆಟವ ಹಸುಳೆಗಳಾಡುತ 

ಮೈಮನ ಮರೆಯುವರು. 


Padya


Irulina kesarali aralida taavare

Chandira nagutihanu.

Majjigeyolagina benneya haage

Teluta barutihanu.


Taara balagadi taanondaagi

Baanali naliyuvanu.

Oduva modada hindolagaaduta

Miri miri minuguvanu.


Haalina belakanu challuta dharege

Tampanu haraduvanu.

Aaduva makkala dehake chetana

Chandira needuvanu.


Rampava maaduva kandana ramisalu

Ammanu toruvalu.

Chandira kareyuta haadanu haadi

Annavanunisuvalu.


Tingala belakali angala tumba

Eletaru seruvaru.

Vidhavidha aatava hasulegalaaduta

Maimana mareyuvaru.

              

No comments:

Post a Comment