Janapada Geete
Song link: Click Here
Tingalu mulugidavo, rangole belagidavo,
Namma swami madappana poojegendu baale baagidavo ||
Appa madayyanige, tuppada deepa hacchi,
Hombaale seve maaduvaga, baale baagidavo ||
Anna maadayyanu, sanna terina myale,
Summane kutu sharanaru noduvaaga, baale baagidavo ||
Mallige hoonange, chellitu ninna paruse,
Namma chellatagaara maykarna poojege, baale baagidavo ||
Haalambadinda, haalaravi baruvaaga,
Namma swami valadi beegutta baruvaga, baale baagidavo ||
ಜಾನಪದ ಗೀತೆ
ತಿಂಗಳು ಮುಳುಗಿದವೋ, ರಂಗೋಲೆ ಬೆಳಗಿದವೋ,
ನಮ್ಮ ಸ್ವಾಮಿ ಮಾದಪ್ಪನ ಪೂಜೆಗೆಂದು ಬಾಳೆ ಬಾಗಿದವೋ
।।ಪ।।
ಅಪ್ಪ ಮಾದಯ್ಯನಿಗೆ, ತುಪ್ಪದ ದೀಪ ಹಚ್ಚಿ,
ಹೊಂಬಾಳೆ ಸೇವೆ ಮಾಡುವಾಗ, ಬಾಳೆ ಬಾಗಿದವೋ ।।೧।।
ಅಣ್ಣ ಮಾದಯ್ಯನು, ಸಣ್ಣ ತೇರಿನ ಮ್ಯಾಲೆ,
ಸುಮ್ಮನೆ ಕೂತು ಶರಣರು ನೋಡುವಾಗ, ಬಾಳೆ ಬಾಗಿದವೋ
।।೨।।
ಮಲ್ಲಿಗೆ ಹೂನಂಗೆ, ಚೆಲ್ಲಿತು ನಿನ್ನ ಪರುಸೆ,
ನಮ್ಮ ಚೆಲ್ಲಾಟಗಾರ ಮಾಯ್ಕಾರ್ನ ಪೂಜೆಗೆ, ಬಾಳೆ ಬಾಗಿದವೋ
।।೩।।
ಹಾಲಂಬಾಡಿ೦ದ, ಹಾಲರವಿ ಬರುವಾಗ,
ನಮ್ಮ ಸ್ವಾಮಿ ವಾಲಾಡಿ ಬೀಗುತ್ತ ಬರುವಾಗ, ಬಾಳೆ ಬಾಗಿದವೋ
।।೪।।
No comments:
Post a Comment