Saturday, September 27, 2025

Taayiya Haraike (ತಾಯಿಯ ಹರಕೆ)

ಪದ್ಯ 

ಜನಪದ ಗೀತೆ 


ಒಳ್ಳೆಯವರ ಗೆಳೆತನ ಕಲ್ಲುಸಕ್ಕರಿ ಹಾಂಗ 

ಕುಲ್ಲರ 

ಗೆಳೆತನ ಮಾಡಿದರ । ನನಕಂದ 

ಸಲ್ಲದ ಮಾತು ಬರತಾವ ।।


ಮಂದಿ ಮಕ್ಕಳೊಳಗ ಚಂದಾಗಿ ಇರಬೇಕು

 ನಂದೀಯ ಶಿವನ ದಯದಿಂದ । ಹೋಗಾಗ 

ಮಂದಿ ಬಾಯಾಗ ಇರಬೇಕು ।।


ಕೊಟ್ಟು ಕುದಿಯಲು ಬೇಡ ಇಟ್ಟು ಹಂಗಿಸ ಬೇಡ 

ಎಷ್ಟು೦ಡರೆಂದು ಅನಬೇಡ । ಈ ಮೂರು 

ಮುಟ್ಯಾವ ಶಿವನ ಸದರೀಗಿ ।।


ಹಿರಿಯರಿಗೆ ಹಿರಿಯನ್ನು ಕಿರಿಯರಿಗೆ ಕಿರಿಯನ್ನು 

ನೆರೆಗಡ್ಡದ ಮುದುಕರ । ಕಂಡರ 

ತಲೆಬಾಗಿ ನಡೆಯೋ ನನಕಂದ ।।


ಆಚಾರಕ್ಕರಸಾಗು ನೀತಿಗೆ ಪ್ರಭುವಾಗು 

ಮಾತಿನಲಿ ಚೂಡಾಮಣಿಯಾಗು । ಕಂದಯ್ಯ 

ಜ್ಯೋತಿಯೆ ಆಗು ಜಗಕೆಲ್ಲ ।।


Padya


Olleyavara geletana kallusakkari hanga

Kullara geletana maadidara | nanakanda

Sallada maatu barataava ||


Mandi makkalolaga chandagi irabeku

Nandeeya shivana dayadinda | hogaaga

Mandi bayaaga irabeku ||


Kottu kudiyalu beda ittu hangisa beda

Eastundarendu anabeda | ee mooru

Muttyava shivana sadareegi ||


Hiriyarige hiriyannu kiriyarige kiriyannu

Neregaddada mudukara | kandara

Talebaagi nadeyo nanakanda ||


Acharakkarasaagu neetige prabhuvaagu

Maatinali chudamaniyaagu | kandayya

Jyothiye aagu jagakella ||

            


No comments:

Post a Comment