Tuesday, April 21, 2026

Pavadisu Palaksha (ಪವಡಿಸು ಪಾಲಾಕ್ಷ)

Movie: Satishakti (1963)

Singer: P Leela

Song link: Click Here


Pavadisu palaksha, sri virupaksha,

Pampavati prema, hrudaya nalinaksha ||


Navachaitra pournima, ramaneeya ratriyalee,

Tungabhadra tatada, hema kutadriyali,

Ambujanane umeya anuraaga manchadali,

Gambheera bhavaneya, shrungara nidreyali,

Pavadisu palaksha, sri virupaksha ||


Vedaadi maateya, vatsalya sharadhiyali,

Veda vedantada naadatrangadali,

Unnatonnata bhavya kailasa nagariyali,

Annappa guruvarana, ekanta taanadali,

Pavadisu palaksha, sri virupaksha ||


ಚಿತ್ರಗೀತೆ 


ಪವಡಿಸು ಪಾಲಾಕ್ಷ , ಶ್ರೀ ವಿರೂಪಾಕ್ಷ,

ಪಂಪಾವತಿ ಪ್ರೇಮ, ಹೃದಯ ನಳಿನಾಕ್ಷ ।।ಪ।।


ನವಚೈತ್ರ ಪೌರ್ಣಿಮೆ, ರಮಣೀಯ ರಾತ್ರಿಯಲೀ,

ತುಂಗಭದ್ರಾ ತಟದ, ಹೇಮ ಕೂಟಾದ್ರಿಯಲಿ,

ಅಂಬುಜಾನನೇ ಉಮೆಯ ಅನುರಾಗ ಮಂಚದಲಿ,

ಗಂಭೀರ ಭಾವನೆಯ, ಶೃಂಗಾರ ನಿದ್ರೆಯಲಿ,

ಪವಡಿಸು ಪಾಲಾಕ್ಷ , ಶ್ರೀ ವಿರೂಪಾಕ್ಷ ।।೧।।


ವೇದಾದಿ ಮಾತೆಯ, ವಾತ್ಸಲ್ಯ ಶರಧಿಯಲಿ,

ವೇದ ವೇದಾಂತದ ನಾದಾಂತರಂಗದಲಿ,

ಉನ್ನತೋನ್ನತ ಭವ್ಯ ಕೈಲಾಸ ನಗರಿಯಲಿ,

ಅಣ್ಣಪ್ಪ ಗುರುವರನ, ಏಕಾಂತ ತಾಣದಲಿ,

ಪವಡಿಸು ಪಾಲಾಕ್ಷ , ಶ್ರೀ ವಿರೂಪಾಕ್ಷ ।।೨।।

No comments:

Post a Comment