Movie: Shrungara Kavya (1993)
Singer: SPB
Song link: Click Here
Kannada gangeyali meeyuve naneega, meeyuve naneega,
Gandhada kampinali, haaduve naneega, haaduve naneega,
Jeevana gayana pavanavu, devara varadinda ||
Olavina shrutiyiralu, mana bayasida satiyiralu,
Saralate saviyiralu, nija geleyaru jotheyiralu,
Swargada, kanasetake, muktiya bhrame etake, badukige,
Honnina hore etake, keertiya sere etake, badukige,
Sundara samsara, savi saalade ||
Kalegala tavariralu, kavi rushigala banaviralu,
Kalikeya kadaliralu, guri talupiso hadagiralu,
Nityavu hosa sadhane, satyave aalochane, badukige,
Snehave sahachariyu, premave sahapatiyu, badukige,
Sundara samsara, savi saalade ||
ಚಿತ್ರಗೀತೆ
ಕನ್ನಡ ಗಂಗೆಯಲಿ, ಮೀಯುವೆ ನಾನೀಗ, ಮೀಯುವೆ ನಾನೀಗ,
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ,
ಜೀವನ ಗಾಯನ ಪಾವನವು, ದೇವರ ವರದಿಂದ ।।ಪ।।
ಒಲವಿನ ಶೃತಿಯಿರಲು, ಮನ ಬಯಸಿದ ಸತಿಯಿರಲು,
ಸರಳತೆ ಸವಿಯಿರಲು, ನಿಜ ಗೆಳೆಯರು ಜೊತೆಯಿರಲು,
ಸ್ವರ್ಗದ ಕನಸೇತಕೆ, ಮುಕ್ತಿಯ ಭ್ರಮೆ ಏತಕೆ, ಬದುಕಿಗೇ,
ಹೊನ್ನಿನ ಹೊರೆ ಏತಕೆ, ಕೀರ್ತಿಯ ಸೆರೆ ಏತಕೆ, ಬದುಕಿಗೇ,
ಸುಂದರ ಸಂಸಾರ, ಸವಿ ಸಾಲದೆ ।।೧।।
ಕಲೆಗಳ ತವರಿರಲು, ಕವಿ ಋಷಿಗಳ ಬನವಿರಲೂ,
ಕಲಿಕೆಯ ಕಡಲಿರಲು, ಗುರಿ ತಲುಪಿಸೊ ಹಡಗಿರಲೂ,
ನಿತ್ಯವೂ ಹೊಸ ಸಾಧನೆ, ಸತ್ಯವೆ ಆಲೋಚನೆ, ಬದುಕಿಗೇ,
ಸ್ನೇಹವೇ ಸಹಚಾರಿಯು, ಪ್ರೇಮವೆ ಸಹಪಾಟಿಯು, ಬದುಕಿಗೇ,
ಸುಂದರ ಸಂಸಾರ, ಸವಿ ಸಾಲದೆ ।।೨।।

No comments:
Post a Comment