Sunday, April 12, 2026

O Panduranga Prabho Vittala (ಓ ಪಾಂಡುರಂಗ ಪ್ರಭೋ ವಿಠಲ)

Movie: Sati Sakkubayi (1985)

Singer: S Janaki

Song link: Click Here


O panduranga, prabho vittala, venu gopala, rukminilola,

Ninnee pavana paadagala, mahimeya bannise maatugala,

Kaneno tande vittala..,

O panduranga prabho vittala ||


Aakasha bhumigala aledantha paada,

Kaligana shiradi kunidaadida paada,

Kananadi kallada, muni satige jeevava tanda,

Pavana sripaadava nambihenayya ||


Sridevi pojisuva srihariya paada,

Bhakutarige mukutiyanu koduvantha paada,

Paapavanu kalevantha, suragange janmisidantha,

Rangana sripaadava nambihenayya ||


ಚಿತ್ರಗೀತೆ 


ಓ ಪಾಂಡುರಂಗ ಪ್ರಭೋ ವಿಠಲ, ವೇಣು ಗೋಪಾಲ ರುಕ್ಮಿಣಿ ಲೋಲ,

ನಿನ್ನೀ ಪಾವನ ಪಾದಗಳ, ಮಹಿಮೆಯ ಬಣ್ಣಿಸೆ ಮಾತುಗಳ,

ಕಾಣೆನೂ ತಂದೆ ವಿಠ್ಠಲ.., 

ಓ ಪಾಂಡುರಂಗ ಪ್ರಭೋ ವಿಠಲ, ಪ್ರಭೋ ವಿಠ್ಠಲ ।।ಪ।।


ಆಕಾಶ ಭೂಮಿಗಳ ಅಳೆದಂಥ ಪಾದ,

ಕಾಳಿಂಗನ ಶಿರದಿ ಕುಣಿದಾಡಿದ ಪಾದ,

ಕಾನನದಿ ಕಲ್ಲಾದ, ಮುನಿ ಸತಿಗೆ ಜೀವವ ತಂದ,

ಪಾವನ ಶ್ರೀಪಾದವ ನಂಬಿಹೆನಯ್ಯಾ ।।೧।।


ಶ್ರೀದೇವಿ ಪೂಜಿಸುವ ಶ್ರೀಹರಿಯ ಪಾದ,

ಭಕುತರಿಗೆ ಮುಕುತಿಯನು ಕೊಡುವಂಥ ಪಾದ,

ಪಾಪವನು ಕಳೆವಂಥ, ಸುರಗಂಗೆ ಜನ್ಮಿಸಿದಂಥ,

ರಂಗನ ಶ್ರೀಪಾದವ ನಂಬಿಹೆನಯ್ಯ ।।೨।।

No comments:

Post a Comment