Movie: Mantralaya Mahatme (1966)
Singer: P B Srinivas
Song link: Click Here
Kaliyirondu patavannu, kannada tai makkale,
Kalla kadedu murthy maado, enna putta shilpigale ||
Vidyeyalle vinayavide, vinayadalle keerti ide,
Nimma kaiya mushtiyolage, taaya bayake bahalavide ||
Vijayanagaradalli vidyaranyaremba obbaru,
Manna taaya, kanna neera, todeye taane nindaru,
Eleyatanade ella vidye kalitu yogiyadaru,
Kannada tai madila tumba, honna maleya surisidaru ||
Immadi pulikeshiyante, neevu veeraragabeku,
Vyasarayarante neevu, padavi moha bidabeku,
Tyaga buddhiyinda neevu, taaya seve maadabeku,
Kalitu kaligalagabeku, naale naadanalabeku ||
ಚಿತ್ರಗೀತೆ
ಕಲಿಯಿರೊಂದು ಪಾಠವನ್ನು, ಕನ್ನಡ ತಾಯ್ ಮಕ್ಕಳೇ,
ಕಲ್ಲ ಕಡೆದು ಮೂರ್ತಿ ಮಾಡೋ, ಎನ್ನ ಪುಟ್ಟ ಶಿಲ್ಪಿಗಳೇ ।।ಪ।।
ವಿದ್ಯೆಯಲ್ಲೆ ವಿನಯವಿದೆ, ವಿನಯದಲ್ಲೆ ಕೀರ್ತಿ ಇದೆ,
ನಿಮ್ಮ ಕೈಯ ಮುಷ್ಠಿಯೊಳಗೆ, ತಾಯ ಬಯಕೆ ಬಹಳವಿದೆ ।।೧।।
ವಿಜಯನಗರದಲ್ಲಿ ವಿದ್ಯಾರಣ್ಯರೆಂಬ ಒಬ್ಬರು,
ಮನ್ನಾ ತಾಯ, ಕಣ್ಣ ನೀರ, ತೊಡೆಯೆ, ತಾನೇ ನಿಂದರು,
ಎಳೆಯತನದೆ ಎಲ್ಲ ವಿದ್ಯೆ ಕಲಿತು ಯೋಗಿಯಾದರು,
ಕನ್ನಡ ತಾಯ್ ಮಡಿಲ ತುಂಬ ಹೊನ್ನ ಮಳೆಯ ಸುರಿಸಿದರು ।।೨।।
ಇಮ್ಮಡಿ ಪುಲಿಕೇಶಿಯಂತೆ, ನೀವು ವೀರರಾಗಬೇಕು,
ವ್ಯಾಸರಾಯರಂತೆ ನೀವು, ಪದವಿ ಮೋಹ ಬಿಡಬೇಕು,
ತ್ಯಾಗ ಬುದ್ದಿಯಿಂದ ನೀವು, ತಾಯ ಸೇವೆ ಮಾಡಬೇಕು,
ಕಲಿತು ಕಲಿಗಳಾಗಬೇಕು, ನಾಳೆ ನಾಡನಾಳಬೇಕು ।।೩।।
No comments:
Post a Comment