Movie: Yajamaana (2000)
Singer: Rajesh Krishnan
Song link: Click Here
Prema chandrama, kaige siguvude, hele tangaali, nee hele tangaali,
Manasaare mecchikoluve, hrudayana bicchi koduve,
Ee bhumi irovaregu, naa premiyagiruve ||
Banali hunnimeyadare nee, saveyabeda, saveyuve na,
Menada belake aadaru nee, karagabeda karaguve na,
Hoo dotave aadare neenu, hoogala badalu uduruve na,
Hele tangaali, nee hele tangaali ||
Ee pratiroopa bidisalu naa, nettarale bannavaniduve,
Ee pratibimbava kettalu na, edeya romada uli iduve,
Kaviteya haage baredidalu, usirane basidu padaviduve,
Hele tangaali, nee hele tangaali ||
ಚಿತ್ರಗೀತೆ
ಪ್ರೇಮ ಚಂದ್ರಮ, ಕೈಗೆ ಸಿಗುವುದೆ, ಹೇಳೇ ತಂಗಾಳಿ, ನೀ ಹೇಳೇ ತಂಗಾಳಿ,
ಮನಸಾರೆ ಮೆಚ್ಚಿಕೊಳುವೆ, ಹೃದಯಾನಾ ಬಿಚ್ಚಿ ಕೊಡುವೆ,
ಈ ಭೂಮಿ ಇರೊವರೆಗೂ, ನಾ ಪ್ರೇಮಿಯಾಗಿರುವೆ ।।ಪ।।
ಬಾನಲಿ ಹುಣ್ಣಿಮೆಯಾದರೆ ನೀ, ಸವೆಯಬೇಡ ಸವೆಯುವೆ ನಾ,
ಮೇಣದ ಬೆಳಕೆ ಆದರು ನೀ, ಕರಗಬೇಡ ಕರಗುವೆ ನಾ,
ಹೂ ದೋಟವೆ ಆದರೆ ನೀನು, ಹೂಗಳ ಬದಲು ಉದುರುವೆ ನಾ,
ಹೇಳೇ ತಂಗಾಳಿ, ನೀ ಹೇಳೇ ತಂಗಾಳಿ ।।೧।।
ಈ ಪ್ರತಿರೂಪ ಬಿಡಿಸಲು ನಾ, ನೆತ್ತರಲೆ ಬಣ್ಣವನಿಡುವೆ,
ಈ ಪ್ರತಿಬಿಂಬವ ಕೆತ್ತಲು ನಾ, ಎದೆಯ ರೋಮದ ಉಳಿ ಇಡುವೆ,
ಕವಿತೆಯ ಹಾಗೆ ಬರೆದಿಡಲು, ಉಸಿರನೆ ಬಸಿದು ಪದವಿಡುವೆ,
ಹೇಳೇ ತಂಗಾಳಿ, ನೀ ಹೇಳೇ ತಂಗಾಳಿ ।।೨।।
No comments:
Post a Comment