Movie: Aliya Geleya (1971)
Singer: P B Srinivas
Song link: Click Here
Nagutide dhare indu, muttina maleyalli,
Telona naavindu harushada holeyalli ||
Taavare hoovina kangalali, tumbida bayakeya tampirali,
Aadida maatu nenapirali, naaleya namma baalinali,
Hosa hosa anubhava dorakali, hosa hosa kaviteya bareyali ||
Siritana badatana enirali, nammaya manasu ondirali,
Ambali ganjiye aagirali, adarale sukhavu namagirali,
Kila kila nageyu hariyalee, pulakita manavu naliyali ||
ಚಿತ್ರಗೀತೆ
ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲೀ,
ತೇಲೋಣ ನಾವಿಂದು ಹರುಷದ ಹೊಳೆಯಲ್ಲೀ ।।ಪ।।
ತಾವರೆ ಹೂವಿನ ಕಂಗಳಲಿ, ತುಂಬಿದ ಬಯಕೆಯ ತಂಪಿರಲಿ,
ಆಡಿದ ಮಾತು ನೆನಪಿರಲಿ, ನಾಳೆಯ ನಮ್ಮ ಬಾಳಿನಲಿ,
ಹೊಸ ಹೊಸ ಅನುಭವ ದೊರಕಲೀ, ಹೊಸ ಹೊಸ ಕವಿತೆಯ ಬರೆಯಲೀ ।।೧।।
ಸಿರಿತನ ಬಡತನ ಏನಿರಲಿ, ನಮ್ಮಯ ಮನಸು ಒಂದಿರಲಿ,
ಅಂಬಲಿ ಗಂಜಿಯೆ ಆಗಿರಲಿ, ಅದರಲೆ ಸುಖವು ನಮಗಿರಲಿ,
ಕಿಲ ಕಿಲ ನಗೆಯು ಹರಿಯಲೀ, ಪುಲಕಿತ ಮನವು ನಲಿಯಲೀ
।।೨।।
No comments:
Post a Comment