Bhaktigeete
Singer: B K Sumitra
Song link: Click Here
Saavira mettila hatti bandare,
Sannidhi dorakuvudu, taayiya darshana dorakuvudu,
Saavira bharava hottiha manake,
Shantiyu labhisuvudu, chamundi varavu labhisuvudu ||
Danuja mahishana, damana maadida,
Durgeya charanavide, asura mardini charanavide,
Naalige chachi, rakkasa raktava heerida roopavide,
Shaktiya rudra swarupavide ||
Parvata nandini nandita medini,
Parvati aalayavu, nirmala aanandaalayavu,
Paapa vimochani pushpa vilochini,
Parashive dhamavidu - nischala shanti nivaasavidu ||
Karpuradaarati hombelakalli, kantumba noduvenu,
Ambeya keertiya haaduvenu,
Taanagi banda, santoshadalli, maiyanu mareyuvenu,
Paadake maibaagi namisuvenu ||
ಭಕ್ತಿಗೀತೆ
ಸಾವಿರ ಮೆಟ್ಟಿಲ ಹತ್ತಿ ಬಂದರೆ,
ಸನ್ನಿಧಿ ದೊರಕುವುದು, ತಾಯಿಯ ದರ್ಶನ ದೊರಕುವುದು
ಸಾವಿರ ಭಾರವ ಹೊತ್ತಿಹ ಮನಕೆ,
ಶಾಂತಿಯು ಲಭಿಸುವುದು, ಚಾಮುಂಡಿ ವರವು ಲಭಿಸುವುದು ।।
ದನುಜ ಮಹಿಷನ, ದಮನ ಮಾಡಿದ,
ದುರ್ಗೆಯ ಚರಣವಿದೆ, ಅಸುರ ಮರ್ದಿನಿ ಚರಣವಿದೆ,
ನಾಲಿಗೆ ಚಾಚಿ, ರಕ್ಕಸ ರಕ್ತವ ಹೀರಿದ ರೂಪವಿದೆ,
ಶಕ್ತಿಯ ರುದ್ರ ಸ್ವರೂಪವಿದೆ ।।
ಪರ್ವತ ನಂದಿನಿ ನಂದಿತ ಮೇದಿನಿ,
ಪಾರ್ವತಿ ಆಲಯವು, ನಿರ್ಮಲ ಆನಂದಾಲಯವು,
ಪಾಪ ವಿಮೋಚನಿ ಪುಷ್ಪ ವಿಲೋಚನಿ,
ಪರಶಿವೆ ಧಾಮವಿದು - ನಿಶ್ಚಲ ಶಾಂತಿ ನಿವಾಸವಿದು ।।
ಕರ್ಪೂರದಾರತಿ ಹೊಂಬೆಳಕಲ್ಲಿ, ಕಣ್ತುಂಬ ನೋಡುವೆನು
ಅಂಬೆಯ ಕೀರ್ತಿಯ ಹಾಡುವೆನು,
ತಾನಾಗಿ ಬಂದ, ಸಂತೋಷದಲ್ಲಿ, ಮೈಯನು ಮರೆಯುವೆನು
ಪಾದಕೆ ಮೈಬಾಗಿ ನಮಿಸುವೆನು ।।
No comments:
Post a Comment