Bhaktigeete
Singer: SPB
Song link: Click Here
Munjaane manjinali, manchale madilalli,
Tungeya tadiyalli bande,
Mudanada ranginali, muppada yatigalu,
Mudadinda barutuhuda naa kande ||
Nadiya aleya kalaravada raagakke, paadukeyu hakittu taala,
Tejadali arunadali anda.., koralalli tulasi manimaala
Entha shantia, entha kanti,
Kannaralisi beragaagi ninde ||
Tengu kooda talebaagi, namisitavarige, tangaali nudiyitavara naama
Raghavendraya namaha, enditu baanadi
Nijavaagi ade swargadhama
Bhakti hommi, bhashpha chimmi, shirasa namaami guruvende ||
Mugulunageyu sulidaadide mukhadalli, maidadavi harasidaru nanna,
Mecchide naa magane ninna kirubhaktige,
Kaamitavu phalisuvudu ninna,
Raayara maatu kelide sotu, kanasu mugidu maayavaytu nidde ||
ಭಕ್ತಿಗೀತೆ
ಮುಂಜಾನೆ ಮಂಜಿನಲಿ, ಮಂಚಾಲೆ ಮಡಿಲಲ್ಲಿ,
ತುಂಗೆಯಾ ತಡಿಯಲ್ಲಿ ಬಂದೆ,
ಮೂಡಣದಾ ರಂಗಿನಲಿ, ಮುಪ್ಪಾದ ಯತಿಗಳು,
ಮುದದಿಂದ ಬರುತಿಹುದ ನಾ ಕಂಡೆ ।।ಪ।।
ನದಿಯ ಕಲರವದ ರಾಗಕ್ಕೆ, ,ಪಾದುಕೆಯು ಹಾಕಿತ್ತು ತಾಳ,
ತೇಜದಲಿ ಅರುಣದಲಿ ಅಂದ, ಕೊರಳಲ್ಲಿ ತುಳಸಿ ಮಣಿಮಾಲೆ,
ಎಂಥಾ ಶಾಂತಿ ಎಂಥಾ ಕಾಂತಿ,
ಕಣ್ಣರಳಿಸಿ ಬೆರಗಾಗಿ ನಿಂತೆ ।।೧।।
ತೆಂಗು ಕೂಡ ತಲೆಬಾಗಿ ನಮಿಸಿತವರಿಗೆ, ತಂಗಾಳಿ ನುಡಿಯಿತವರ ನಾಮ,
ರಾಘವೇಂದ್ರಾಯ ನಮಃ, ಎಂದಿತು ಬಾನಾಡಿ,
ನಿಜವಾಗಿ ಅದೇ ಸ್ವರ್ಗಧಾಮ,
ಭಕ್ತಿಹೊಮ್ಮಿ, ಭಾಷ್ಫ ಚಿಮ್ಮಿ, ಶಿರಸಾ ನಮಾಮಿ ಗುರುವೆಂದೆ ।।೨।।
ಮುಗುಳ್ನಗೆಯು ಸುಳಿದಾಡಿದೆ ಮುಖದಲ್ಲಿ, ಮೈದಡವಿ ಹರಸಿದರು ನನ್ನ ,
ಮೆಚ್ಚಿದೆ ನಾ ಮಗನೇ ನಿನ್ನ ಕಿರುಭಕ್ತಿಗೆ,
ಕಾಮಿತವೂ ಫಲಿಸುವುದು ನಿನ್ನ,
ರಾಯರ ಮಾತು ಕೇಳಿದೆ ಸೋತು, ಕನಸು ಮುಗಿದು ಮಾಯವಾಯ್ತು ನಿದ್ದೆ ।।೩।।
No comments:
Post a Comment