Thursday, October 23, 2025

Aaneya Mele Ambari Kande (ಆನೆಯ ಮೇಲೆ ಅಂಬಾರಿ ಕಂಡೆ)

Movie: Haalu Jenu (1982)

Singers: Dr. Rajkumar, Sulochana

Song link: Click Here


Aaneya mele ambari kande, ambari olage ninnannu kande,

Nanne naa kande, pakkadalli nanne naa kande,

Aramane naanu kande, olagade ninna kande,

Jotheyalli nannanne naanu kande ||


Brundavanadali neerina chilume kande,

Bannada belakalli naliva ninna kande,

Ninna nadu balasi ninta nanne kande,

Beluru gudiyalli hennina bombe kande,

Avala anda kandu sotu mohagondu,

Ninta ninna kande ||


Srirangapattanadi rangana gudiya kande,

Sriranga nathanante malagida ninna kande,

Srideviyante ninna saniha nanne kande,

Haalina kadalinda banda ninna kande,

Edeya gudiyalli ninna sere haaki,

 naliva nanne kande ||


Aaneya mele ambari kande, baagila baliyalli,

Aapheesar kande ||


ಚಿತ್ರಗೀತೆ 


ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ,

ನನ್ನೇ ನಾ ಕಂಡೆ, ಪಕ್ಕದಲ್ಲಿ ನನ್ನೇ ನಾ ಕಂಡೆ,

ಅರಮನೆ ನಾನು ಕಂಡೆ, ಒಳಗಡೆ ನಿನ್ನಾ ಕಂಡೆ,

ಜೊತೆಯಲ್ಲಿ ನನ್ನನ್ನ್ನೇ ನಾನು ಕಂಡೆ ।।ಪ।।


ಬೃಂದಾವನದಲಿ ನೀರಿನ ಚಿಲುಮೆ ಕಂಡೆ,

ಬಣ್ಣದ ಬೆಳಕಲ್ಲಿ ನಲಿವಾ ನಿನ್ನ ಕಂಡೆ,

ನಿನ್ನಾ ನಡು ಬಳಸಿ ನಿಂತ ನನ್ನೇ ಕಂಡೆ,

ಬೇಲೂರು ಗುಡಿಯಲ್ಲಿ ಹೆಣ್ಣಿನ ಬೊಂಬೆ ಕಂಡೆ,

ಅವಳ ಅಂದ ಕಂಡು ಸೋತು ಮೋಹಗೊಂಡು, 

ನಿಂತ ನಿನ್ನಾ ಕಂಡೆ ।।೧।।


ಶ್ರೀರಂಗಪಟ್ಟಣದಿ ರಂಗನ ಗುಡಿಯ ಕಂಡೆ,

ಶ್ರೀರಂಗನಾಥನಂತೆ ಮಲಗಿದ ನಿನ್ನ ಕಂಡೆ,

ಶ್ರೀದೇವಿಯಂತೆ ನಿನ್ನಾ ಸನಿಹ ನನ್ನೇ ಕಂಡೆ,

ಹಾಲಿನ ಕಡಲಿಂದ ಬಂದ ನಿನ್ನ ಕಂಡೆ,

ಎದೆಯ ಗುಡಿಯಲ್ಲಿ ನಿನ್ನಾ ಸೆರೆ ಹಾಕಿ, 

ನಲಿವಾ ನನ್ನೇ ಕಂಡೆ ।।೨।।


ಆನೆಯ ಮೇಲೆ ಅಂಬಾರಿ ಕಂಡೆ, ಬಾಗಿಲ ಬಳಿಯಲ್ಲಿ,

ಆಫೀಸರ್ ಕಂಡೆ ।।

                                     

No comments:

Post a Comment