Thursday, October 23, 2025

Varava Kode Chamundi (ವರವ ಕೊಡೆ ಚಾಮುಂಡಿ)

Bhaktigeete

Singer: B K Sumitra

Song link: Click Here


Chamundi, devi chamundi..

Varava kode chamund, varava kode,

Seragoddi beduvenu varava kode, varava kode,

Olavinda neenenage, vara needi salahadire,

Ninnane, naa ninna paada bide, ninna paada bide ||


Kunkumavu arishinavu, holevantha karimaniyu,

Stiravaagi iruvante.. varava kode,

Seragoddi beduvenu, varava kode, varava kode ||


Baagilali torana, maduve munji naamakarana,

Yavagalu aaguvante varava kode,

Ninnane naa ninna, paada bide, ninna paada bide ||


Hesarulla mane katti, hasu karuva saalugatti,

Vamshavruddi aaguvante varava kode

Seragoddi beduvenu varava kode, varava kode ||


Maneyalli harusha kottu, manadalli shanti kottu

Bhakti hrudaya tumbuvante varava kode

Ninnane naa ninna paada bide, ninna paada bide ||


ಭಕ್ತಿಗೀತೆ 


ಚಾಮುಂಡಿ, ದೇವಿ ಚಾಮುಂಡಿ ... 

ವರವ ಕೊಡೆ ಚಾಮುಂಡಿ, ವರವ ಕೊಡೆ, 

ಸೆರಗೊಡ್ಡಿ ಬೇಡುವೆನು ವರವ ಕೊಡೆ, ವರವ ಕೊಡೆ, 

ಒಲವಿಂದ ನೀನೆನಗೆ, ವರ ನೀಡಿ ಸಲಹದಿರೇ, 

ನಿನ್ನಾಣೆ, ನಾ ನಿನ್ನ ಪಾದಬಿಡೆ, ನಿನ್ನ ಪಾದ ಬಿಡೆ ।।


ಕುಂಕುಮವು ಅರಿಶಿನವು, ಹೊಳೆವಂಥ ಕರಿಮಣಿಯು 

ಸ್ಥಿರವಾಗಿ ಇರುವಂತೆ.., ವರವ ಕೊಡೆ, 

ಸೆರಗೊಡ್ಡಿ ಬೇಡುವೆನು, ವರವ ಕೊಡೆ, ವರವ ಕೊಡೆ   ।।


ಬಾಗಿಲಲಿ ತೋರಣ ಮದುವೆ ಮುಂಜಿ ನಾಮಕರಣ 

ಯಾವಾಗಲೂ ಆಗುವಂತೆ ವರವ ಕೊಡೆ 

ನಿನ್ನಾಣೆ, ನಾ ನಿನ್ನ ಪಾದ ಬಿಡೆ, ನಿನ್ನ ಪಾದ ಬಿಡೆ ।।


ಹೆಸರುಳ್ಳ ಮನೆ ಕಟ್ಟಿ, ಹಸು ಕರುವ ಸಾಲುಗಟ್ಟಿ 

ವಂಶವೃದ್ದಿ ಆಗುವಂತೆ ವರವ ಕೊಡೆ 

ಸೆರಗೊಡ್ಡಿ ಬೇಡುವೆನು, ವರವ ಕೊಡೆ, ವರವ ಕೊಡೆ ।।


ಮನೆಯಲ್ಲಿ ಹರುಷ ಕೊಟ್ಟು, ಮನದಲ್ಲಿ ಶಾಂತಿ ಕೊಟ್ಟು 

ಭಕ್ತಿ ಹೃದಯ ತುಂಬುವಂತೆ ವರವ ಕೊಡೆ 

ನಿನ್ನಾಣೆ, ನಾ ನಿನ್ನ ಪಾದಬಿಡೆ, ನಿನ್ನ ಪಾದ ಬಿಡೆ ।।

                                

No comments:

Post a Comment