Movie: Aliya Geleya (1971)
Singer: S Janaki
Ondaagi baalabeku, naadali, ondaagi baalabeku,
Munnededu saagabeku, naavu kannadake dudiyabeku ||
Odininda ariyabeku, baalina bele,
Andavaagi belago mane, devanaa nele,
Gudisilaadaru adara kasava gudisuva,
Snanamaadi balika naavu ganji kudiyuva,
Haraku chindiyaadaru ogedu dharisuva,
Swanta dudimeyindale swarga kaimele ||
Desha sevegaagi ella ondaagalu, naavu mundaagalu,
Honna beleya bittutiralu kshamaviradu ellu,
Kaaya kashta maade, namma naada elige,
Baala eru peru sariyaage, baradu munde bege ||
ಚಿತ್ರಗೀತೆ
ಒಂದಾಗಿ ಬಾಳಬೇಕು, ನಾಡಲಿ, ಒಂದಾಗಿ ಬಾಳಬೇಕು,
ಮುನ್ನೆಡೆದು ಸಾಗಬೇಕು, ನಾವು ಕನ್ನಡಕೆ ದುಡಿಯಬೇಕು ।।ಪ।।
ಓದಿನಿಂದ ಅರಿಯಬೇಕು, ಬಾಳಿನಾ ಬೆಲೆ,
ಅಂದವಾಗಿ ಬೆಳಗೊ ಮನೆ, ದೇವನಾ ನೆಲೆ,
ಗುಡಿಸಿಲಾದರೂ ಅದರ ಕಸವ ಗುಡಿಸುವ,
ಸ್ನಾನಮಾಡಿ ಬಳಿಕ ನಾವು ಗಂಜಿ ಕುಡಿಯುವ,
ಹರಕು ಚಿಂದಿಯಾದರು ಒಗೆದು ಧರಿಸುವ,
ಸ್ವಂತ ದುಡಿಮೆಯಿಂದಲೇ ಸ್ವರ್ಗ ಕೈಮೇಲೆ ।।
ದೇಶಸೇವೆಗಾಗಿ ಎಲ್ಲ ಒಂದಾಗಲು, ನಾವು ಮುಂದಾಗಲು,
ಹೊನ್ನ ಬೆಳೆಯ ಬಿತ್ತುತ್ತಿರಲು ಕ್ಷಾಮ ವಿರದು ಎಲ್ಲು,
ಕಾಯ ಕಷ್ಟ ಮಾಡೆ, ನಮ್ಮ ನಾಡ ಏಳಿಗೆ,
ಬಾಳ ಏರು ಪೇರು ಸರಿಯಾಗೆ, ಬರದು ಮುಂದೆ ಬೇಗೆ ।।
No comments:
Post a Comment