Mayadantha male bantanna, madagada kerege
Angaiyastu moodanage, bhumi tukada gaali beesi
Gudugi goodagi chelidalo, gangamma tayi ||
Eeri myagala ballalu raya
Kereya olagada bestara huduga
Odi odi suddiya kodirayyo
Na nilluvalla ||
Aaru savira oddara karesi
Mooru savira guddali tarsi
Solu solige mannanna haksayyo
Na nilluvalalla ||
Aaru savira kurigalu tarsi
Mooru savira kudugoola tarsi
Kallu kallige raitava bidisayyo
Na niluvalalla ||
Ondu bandeeli velyadadike
Ondu bandeeli chegali tamata
Moole moolegu gangamna madsayyo
Na niluvalalla ||
ಜನಪದ ಗೀತೆ
ಮಾಯದಂಥ ಮಳೆ ಬಂತಣ್ಣಾ
ಮದಗಾದ ಕೆರೆಗೆ
ಅಂಗೈಯಷ್ಟು ಮೋಡನಾಗಿ
ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿ ।।ಪ ।।
ಏರಿಮ್ಯಾಗಳ ಬಳ್ಳಾಳು ರಾಯ
ಕೆರೆಯಾ ಒಳಗಡ ಬೆಸ್ತರ ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೋ
ನಾ ನಿಲ್ಲುವಳಲ್ಲಾ ।।೧।।
ಆರು ಸಾವಿರ ಒಡ್ಡರ ಕರೆಸಿ
ಮೂರು ಸಾವಿರ ಗುದ್ದಲಿ ತರ್ಸಿ
ಸೋಲು ಸೋಲಿಗೆ ಮಣ್ಣನ್ನ ಹಾಕ್ಸಯ್ಯೋ
ನಾ ನಿಲ್ಲುವಳಲ್ಲಾ ।।೨।।
ಆರು ಸಾವಿರ ಕುರಿಗಳ ತರ್ಸಿ
ಮೂರು ಸಾವಿರ ಕಾಡುಗೋಲ ತರ್ಸಿ
ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೋ
ನಾ ನಿಲ್ಲುವಳಲ್ಲಾ ।।೩।।
ಒಂದು ಬಂಡೀಲಿ ವೀಳ್ಯದಡಿಕೆ
ಒಂದು ಬಂಡೀಲಿ ಚಿಗಳಿ ತಮಟ
ಮೂಲೆ ಮೂಲೆಗೂ ಗಂಗಮ್ನ ಮಾಡ್ಸಯ್ಯೋ
ನಾ ನಿಲ್ಲುವಳಲ್ಲಾ ।।೪।।

No comments:
Post a Comment