Paravashanadenu, ariyuva munnave
Parichitanagali hege, pranayaku munnave
Idakinta bega innu, sigabaaraditte nenu
Innadaru koodottuko, nee nannanu
Kaleyuva munnave ||
Ninna kannigantu naanu, nirupayogi eegalu
Innu bere yenu beku, prema yogiygalu
Hoo araluva saddanu, ninna nageyalli kelaballe
Nanna ekaanthavannu,tiddhikodu neeneega nintalle
Naanene andarunu, nanaginta chooti neenu
Tutiyalliye mucchittuko, mutthondanu
Kaleyuva munnave ||
Kanasali thumba kettiruvenu, ninnanu kelade
Rekkeya neene kattiralu, ee hrudayavu haaride
Nanna kouthuka ondonde helabeku
Aalisuvaga nodu nannane saku
Sahavasa doshadinda, sari hogabahude nanu
Nanagagiye kadittuko, hataondanu
Kenakuva munnave ||
ಚಿತ್ರೆಗೀತೆ
ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ
ಇದಕಿಂತ ಬೇಗ ಇನ್ನು
ಸಿಗಬಾರದಿತ್ತೆ ನೀನು
ಇನ್ನಾದರೂ ಕೊಡಿಟ್ಟುಕೊ ನೀ ನನ್ನನೂ
ಕಳೆಯುವ ಮುನ್ನವೇ ।।ಪ ।।
ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲೂ
ಹೂ .. ಅರಳುವ ಸದ್ದನೂ , ನಿನ್ನ ನಗೆಯಲಿ ಕೇಳಬಲ್ಲೆ
ನನ್ನಾ ಏಕಾಂತವನ್ನು, ತಿದ್ದಿಕೊಡು ನೀನೀಗ ನಿಂತಲ್ಲೆ
ನಾನೇನೆ ಅಂದರೂನು, ನನಗಿಂತ ಚೂಟಿ ನೀನು
ತುಟಿಯಲ್ಲಿಯೆ, ಮುಚ್ಚಿಟ್ಟುಕೊ, ಮುತ್ತೊಂದನೂ
ಕದಿಯುವ ಮುನ್ನವೇ ।।೧।।
ಕನಸಲಿ ತುಂಬ ಕೆಟ್ಟಿರುವೆನು, ನಿನ್ನನು ಕೇಳದೆ
ರೆಕ್ಕೆಯ ನೀನೆ ಕಟ್ಟಿರಲು, ಈ ಹೃದಯವು ಹಾರಿದೇ
ನನ್ನ ಕೌತುಕ, ಒಂದೊಂದೇ ಹೇಳಬೇಕು
ಆಲಿಸುವಾಗ ನೋಡು ನನ್ನನ್ನೆ ಸಾಕು
ಸಹವಾಸ ದೋಷದಿಂದ, ಸರಿ ಹೋಗಬಹುದೆ ನಾನು
ನನಗಾಗಿಯೇ ಕಾದಿಟ್ಟುಕೋ ,ಹಠವೊಂದನೂ
ಕೆಣಕುವ ಮುನ್ನವೇ ।।೨।।

No comments:
Post a Comment