lyrics: Dr K S Narasimhaswami
Song link: Click Here
Deepavu ninnade, gaaliyu ninnade
Aradirali belaku
Kadalu ninnade, hadagu ninnade
Mulugadirali baduku ||
Habbi nagali preeti
Nelaloo bisiloo ellavu ninnade
Erali eekariti ||
Aagondu sidilu eegondu mugilu
Ninage alankara
Allondu hakki ellondu mugulu
Ninage namaskara ||
Alli rana dundubhi ellondu veene
Ninna pratidwani
Aa mahakavya ee bhavageete
Ninna padadwani ||
ಭಾವಗೀತೆ
ದೀಪವು ನಿನ್ನದೇ , ಗಾಳಿಯು ನಿನ್ನದೇ
ಆರದಿರಲಿ ಬೆಳಕು
ಕಡಲು ನಿನ್ನದೇ , ಹಡಗು ನಿನ್ನದೇ
ಮುಳುಗದಿರಲಿ ಬದುಕು ।।ಪ।।
ಬೆಟ್ಟವು ನಿನ್ನದೇ , ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ ।।೧।।
ಆಗೊಂದು ಸಿಡಿಲು , ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ , ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ ।।೨।।
ಅಲ್ಲಿ ರಣ ದುಂದುಭಿ , ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾಕಾವ್ಯ , ಈ ಭಾವಗೀತೆ
ನಿನ್ನ ಪದಧ್ವನಿ ।।೩।।

No comments:
Post a Comment