Janapada geete
Song link: Click Here
Gallu gallenuta gejje gallu sadhimi ta
Gejje gallu sadhimi ta
Ballida rangan valliya mele chellidarokuliya
Nam ballida rangan valliya myale chellidarokuliya ||
Aredaru arishinava adake beresyara sunnava
Andavulla rangan melin gandhadokuliya
Nam Andavulla rangan melin gandhadokuliya ||
Haalinikuliyo olle neeradokuliyo
Lolanada rangan mele halinokuliyo
Nam lolanada rangan mele halinokuliyo ||
Tuppadokuliyo olle oppadokuliyo
Oppavulla rangan mele tuppadokuliyo
Nam oppavulla rangan mele tuppadokuliyo ||
Gandhadokuliyo olle chendadokuliyo
Andavada rangan mele ranginokuliyo
Nam andavada rangan mele ranginokuliyo ||
ಜನಪದ ಗೀತೆ
ಘಲ್ಲು ಘಲ್ಲೆನುತಾ ಗೆಜ್ಜೆ ಘಲ್ಲು ಸಾಧಿಮಿ ತಾ
ಗೆಜ್ಜೆ ಘಲ್ಲು ಸಾಧಿಮಿ ತಾ
ಬಲ್ಲಿದ ರಂಗನ್ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯಾ।
ನಮ್ ಬಲ್ಲಿದ ರಂಗನ್ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯಾ
।।ಪ ।।
ಅರೆದರು ಅರಿಶಿಣವಾ ಅದಕೆ ಬೆರೆಸ್ಯಾರ ಸುಣ್ಣವಾ
ಅಂದವುಳ್ಳ ರಂಗನ್ ಮೇಲಿನ್ ಗಂಧದೋಕುಳಿಯಾ
ನಮ್ ಅಂದವುಳ್ಳ ರಂಗನ್ ಮೇಲಿನ್ ಗಂಧದೋಕುಳಿಯಾ
।।೧।।
ಹಾಲಿನೋಕುಳಿಯೋ ಒಳ್ಳೆ ನೀರದೋಕುಳಿಯೋ
ಲೋಲನಾದ ರಂಗನ್ ಮೇಲೆ ಹಾಲಿನೋಕುಳಿಯೋ
ನಮ್ ಲೋಲನಾದ ರಂಗನ್ ಮೇಲೆ ಹಾಲಿನೋಕುಳಿಯೋ
।।೨।।
ತುಪ್ಪದೋಕುಳಿಯೋ ಒಳ್ಳೆ ಒಪ್ಪದೋಕುಳಿಯೋ
ಒಪ್ಪವುಳ್ಳ ರಂಗನ್ ಮೇಲೆ ತುಪ್ಪದೋಕುಳಿಯೋ
ನಮ್ ಒಪ್ಪವುಳ್ಳ ರಂಗನ್ ಮೇಲೆ ತುಪ್ಪದೋಕುಳಿಯೋ
।।೩।।
ಗಂಧದೋಕುಳಿಯೋ ಒಳ್ಳೆ ಚಂದದೋಕುಳಿಯೋ
ಅಂದವಾದ ರಂಗನ್ ಮೇಲೆ ರಂಗಿನೋಕುಳಿಯೋ
ನಮ್ ಅಂದವಾದ ರಂಗನ್ ಮೇಲೆ ರಂಗಿನೋಕುಳಿಯೋ
।।೪।।

No comments:
Post a Comment