Song link: Click Here
Munjaneddu kumbaranna
Halu banundana
Haryadi manna tulidana
Haari haryadi manna tuliyutta madyana
Naryaru hooruvantha irani ||
Hottareddu kumbaranna
Tuppa banundana
Gatteesi manna tulidana,
Gattisi manna tuliyuta madyana
Mitreru horuvantha irani ||
Akki hittu nanu takkondu tandeevni
Gindeeli tandivni tili duppa
Gindeeli tandivni tili duppa kumbaranna
Tandeedu namma irani ||
Kumbaranna na madadi
Kadagada kai ikki
Kodada myalena baredala,
Kodada myalena baredala
kalyanada sharana basavana nilisyala ||
ಜನಪದ ಗೀತೆ
ಮುಂಜಾನೆದ್ದು ಕುಂಬಾರಣ್ಣ
ಹಾಲು ಬಾನುಂಡಾನ
ಹಾರ್ಯಾಡಿ ಮಣ್ಣಾ ತುಳಿದಾನಾ
ಹಾರಿ ಹಾರ್ಯಾಡಿ ಮಣ್ಣ ತುಳಿಯೂತ ಮಾಡ್ಯಾನ
ನಾರ್ಯರು ಹೊರುವಂಥ ಐರಾಣಿ ।।ಪ ।।
ಹೊತ್ತಾರೆದ್ದು ಕುಂಬಾರಣ್ಣ
ತುಪ್ಪ ಬಾನುಂಡಾನ
ಘಟ್ಟೀಸಿ ಮಣ್ಣಾ ತುಳಿದಾನಾ
ಘಟ್ಟಿಸಿ ಮಣ್ಣಾ ತುಳಿಯೂತ ಮಾಡ್ಯಾನ
ಮಿತ್ರೇರು ಹೊರುವಂಥ ಐರಾಣಿ ।।೧।।
ಅಕ್ಕಿ ಹಿಟ್ಟು ನಾನು ತಕ್ಕೊಂಡು ತಂದೀವ್ನಿ
ಗಿಂಡೀಲಿ ತಂದೀವ್ನಿ ತಿಳಿ ದುಪ್ಪ
ಗಿಂಡೀಲಿ ತಂದೀವ್ನಿ ತಿಳಿ ದುಪ್ಪ ಕುಂಬಾರಣ್ಣ
ತಂದೀಡು ನಮ್ಮ ಐರಾಣಿ ।।೨।।
ಕುಂಬಾರಣ್ಣಾನ ಮಡದಿ
ಕಡಗಾದ ಕೈಯಿಕ್ಕಿ
ಕೊಡದ ಮ್ಯಾಲೇನ ಬರೆದಾಳ
ಕೊಡದ ಮ್ಯಾಲೇನ ಬರೆದಾಳ್ , ಕಲ್ಯಾಣದ
ಶರಣ ಬಸವನ ನಿಲಿಸ್ಯಾಳ ।।೩।।

No comments:
Post a Comment