Janapada geeete
Song link: Click Here
Shivanu bikshakke banda
Needu bare tangi
Ivanatha cheluvarilla
Nodu bare ||
Onde kailajana kapola kane
Ben hinde kattiruva trishula kane
Nandiya kolu patake kane
Mattonddondu padada shaurya kane ||
Maiella havina motha kane
Balada kaiyalli hidida
Nagara betha kane
Vaiyara mooru loka karta kane
Taka thaiyya thaiyya endu kunitan kane ||
Mane mane dappali dimmi saale
Aata hanavannu kotru ollanante kane
Tanivanna nidabekante kaane
Gouri manasa bittiralara nante kane ||
ಜನಪದ ಗೀತೆ
ಶಿವನು ಭಿಕ್ಷಕ್ಕೆ ಬಂದ
ನೀಡು ಬಾರೆ ತಂಗಿ
ಇವನಂಥ ಚೆಲುವರಿಲ್ಲ
ನೋಡು ಬಾರೆ ।।ಪ ।।
ಒಂದೇ ಕೈಲಾಜನ ಕಪೊಲ ಕಾಣೆ
ಬೆನ್ ಹಿಂದೆ ಕಟ್ಟಿರುವ ತ್ರಿಶೂಲ ಕಾಣೆ
ನಂದಿಯ ಕೋಲು ಪತಾಕೆ ಕಾಣೆ
ಮತ್ತೊಂದೊಂದು ಪಾದದ ಶೌರ್ಯ ಕಾಣೆ ।।೧।।
ಮೈಯೆಲ್ಲ ಹಾವಿನ ಮೊತ್ತ ಕಾಣೆ
ಬಲದ ಕೈಯಲ್ಲಿ ಹಿಡಿದ ನಾಗರ ಬೆತ್ತ ಕಾಣೆ
ವಯ್ಯಾರ ಮೂರು ಲೋಕ ಕರ್ತ ಕಾಣೆ
ತಕ ಥಯ್ಯಾ ಥಯ್ಯಾ ಎಂದು ಕುಣಿತಾನ್ ಕಾಣೆ ।।೨।।
ಮನೆ ಮನೆ ಡಪ್ಪಲಿ ದಿಮ್ಮಿ ಸಾಲೆ
ಆತ ಹಣವನ್ನು ಕೊಟ್ರು ಒಲ್ಲನಂತೆ ಕಾಣೆ
ತನಿವಣ್ಣ ನೀಡುಬೇಕಂತೆ ಕಾಣೆ
ಗೌರಿ ಮನಸ ಬಿಟ್ಟಿರಲಾರನಂತೆ ಕಾಣೆ ।।೩।।

No comments:
Post a Comment