ಪದ್ಯ
ಸಾಹಿತ್ಯ: ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಲಿಂಕ್: Click Here
ಗೇರ್ ಗೇರ್ ಮಂಗಣ್ಣ
ಕಡ್ಲೆಕಾಯ್ ನುಂಗಣ್ಣ
ಕೊಂಬೆಯಿಂದ ಕೊಂಬೆಗೆ
ಹೈಜಂಪ್ ಮಾಡೋ ಹನುಮಣ್ಣ !
ಆಟಕ್ ಕರಕೋ ನನ್ನನ್ನೂ
ಲಾಗ ಹಾಕ್ತಿನ್ ನಾನೂನೂ,
ಜೇಬಿನ ತುಂಬ ತಿಂಡೀನ
ತಂದೀದೀನಿ ನಿನಗೂನು !
ಬೇರೆ ಕೋತಿ ಬೆನ್ನಿಂದ
ಹೇನು ಹೆಕ್ಕೋದ್ ಯಾಕಪ್ಪ ?
ಹೆಕ್ಕಿ ಅದನ್ನೆ ತಿಂತೀಯ
ಥೂ,ಥೂ ಕೊಳಕಪ್ಪ
ಮರದ್ ತುಂಬ ಚೇಪೇಕಾಯ್
ಎಲ್ಲ ನಿಂಗೇ ಯಾಕಣ್ಣಾ ?
ಎರಡೇ ಎರಡು ಕಾಯನ್ನ
ಕಿತ್ತು ತಮ್ಮಂಗ್ ಹಾಕಣ್ಣಾ !
ಒಂದೇ ಗೇಣು ಇದೀಯ
ಲಂಕೆಗೆ ಹಾರಿದ್ಯ೦ತಲ್ಲ !
ಲಂಕೇಗ್ ಬೆಂಕಿ ಇಟ್ಯ೦ತೆ
'ಮಂಕೀ' ಅಂದ್ರೆ ನೀನಲ್ವ ?
ಪಿಳ್ ಪಿಳಾ೦ತ ಕಣ್ಬಿಟ್ಟು
ಹಲ್ ಕಿರಿಯೋದು ಯಾಕಣ್ಣಾ ?
ನಿನ್ಹಾಗೇನೇ ಆಡ್ತಾನೆ - ನಮ್
ಪಕ್ಕದ ಮನೆ ರಂಗಣ್ಣ !
Padya
Ger ger manganna
Kadlekai nunganna
Kombeyinda kmbege
Haijump mado hanumanna!
Aatak karko nannanu
Laaga hakteen nanunu,
Jebina tumba tindeena
Tandideeni ninagunu!
Bere koti benninda
Henu hekkod yakappa?
Hekki adanne tinteeya
Thu thu kolakappa!
Marad tumba chepekai
Ella ninge yakanna?
Erade eradu kayanna
Kittu tammang hakanna!
Onde genu ideeya
Lankege haridyantalla!
Lankeg benki ityante
'Monkey' andre neenalva?
Pil pilaanta kannbittu
Hal kiriyodu yakanna?
Ninhaagene aadtane- nam
Pakkad mane ranganna!
No comments:
Post a Comment