ಪದ್ಯ
ಸಾಹಿತ್ಯ: ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಲಿಂಕ್: Click Here
"ಒಂದು ಒಂದು ಎರಡು ಆದ್ರೆ
ಎರಡು ಎರಡು ?" - "ನಾಲ್ಕು
ನಾಲ್ಕು ಚಕ್ಲಿ ಬೇಕು !"
"ಎರಡು ಎರಡು ನಾಲ್ಕು ಸರಿ
ಮೂರು ಮೂರು ?" - "ಆರು
ಆರು ಲೋಟ ಖೀರು !"
"ಮೂರು ಮೂರು ಆರು ಹೌದು
ನಾಲ್ಕು ನಾಲ್ಕು ?" - "ಎಂಟು
ಬಿಚ್ಚು ತಿಂಡಿ ಗಂಟು !"
"ನಾಲ್ಕು ನಾಲ್ಕು ಎಂಟು, ಎಲ್ಲಿ
ಐದು ಐದು ?" - "ಹತ್ತು
ಉಂಡೆ ಜೆಬಿಗ್ ಬಿತ್ತು !"
"ಐದು ಐದು ಹತ್ತು, ಈಗ
ಆರು ಆರು ?" - "ತಾಳಿ
ತಿಂಡಿ ಬಂತು ಏಳಿ ".
Padya
"Ondu ondu eradu aadre
Eradu eradu?" - "nalku
Nalku chakli beku!"
"Eradu eradu nalku sari
Mooru mooru?" - "aaru
Aaru lota kheeru!"
"Mooru mooru aaru houdu
Nalku nalku?" - "entu
Bicchu tindi gantu!"
"Nalku nalku entu, elli
Aidu aidu?" - "hattu
Unde jebig bittu!"
"Aidu aidu hattu, eega
Aaru aaru?" - "taali
Tindi bantu eli".
No comments:
Post a Comment