Movie: Anugraha (1971)
Singer: S Janaki
Song link: Click Here
Madhura naada haridu haridu, mudadi hrudaya aralali
Tereda naliva baninalli, bhava kirana susali ||
Olada nabhake haari haari, sukhada neleya seri seri
Preeti maata jena surisi, edeya tumba haadi haadi ||
Nageya meru shikharadalli, tereya prema kandaradalli
Biliya cheluva doniyalli, baala teera serali ||
Manada chinteyella maresi, shanti siriya geluva beresi
Ninna khyati amara vaage, devaanugraha vaagali ||
ಚಿತ್ರಗೀತೆ
ಮಧುರ ನಾದ ಹರಿದು ಹರಿದು, ಮುದದಿ ಹೃದಯ ಅರಳಲಿ
ತೆರೆದ ನಲಿವ ಬಾನಿನಲ್ಲಿ, ಭಾವ ಕಿರಣ ಸೂಸಲಿ ।।ಪ।।
ಒಲದ ನಭಕೆ ಹಾರಿ ಹಾರಿ, ಸುಖದ ನೆಲೆಯ ಸೇರಿ ಸೇರಿ
ಪ್ರೀತಿ ಮಾತ ಜೇನ ಸುರಿಸಿ, ಎದೆಯ ತುಂಬ ಹಾಡಿ ಹಾಡಿ।।೧।।
ನಗೆಯ ಮೇರು ಶಿಖರದಲ್ಲಿ, ತೆರೆಯ ಪ್ರೇಮ ಕಂದರದಲ್ಲಿ
ಬಿಳಿಯ ಚಲುವ ದೋಣಿಯಲ್ಲಿ, ಬಾಳ ತೀರ ಸೇರಲಿ ।।೨।।
ಮನದ ಚಿಂತೆಯೆಲ್ಲಾ ಮರೆಸಿ, ಶಾಂತಿ ಸಿರಿಯ ಗೆಲುವ ಬೆರೆಸಿ
ನಿನ್ನ ಖ್ಯಾತಿ ಅಮರ ವಾಗೆ, ದೇವಾನುಗ್ರಹ ವಾಗಲಿ ।।೨।।
No comments:
Post a Comment