Tuesday, February 6, 2024

Kamalada Hoovinda (ಕಮಲದ ಹೂವಿಂದ)

Movie: Baalu Belagitu (1970)

Singer: P B Srinivas

Song link: Click Here


Kamalada hoovinda, kenneya madidanu

Dumbigalinda, ee mungurulanda ninage tandanu ||


Minchanu chelluva kantiya ee kannali tumbidanu (2)

Dalimbeya hoovina esalinda ee tutigala madidanu

Mettane tutigalu muttidalendu jenanu savaridanu ||


Januma janumada poojeya phala tanda vara neenu (2)

Beladingale hennina roopagi nanagagi bantenu

Anudina hunnime iruliralendu ninnanu kalisidanu ||


Kamana billina bannagala beragisalaguvude (2)

Aa miniguva taare gaganada sneha maretiralaguvude

Balali nanu ninnanu bitu baduliralaguvude ||


ಚಿತ್ರಗೀತೆ 


ಕಮಲದ ಹೂವಿಂದ, ಕೆನ್ನೆಯ ಮಾಡಿದನು 

ದುಂಬಿಗಳಿಂದ, ಈ ಮುಂಗುರುಳಂದ ನಿನಗೇ ತಂದನು ।।ಪ।।


ಮಿಂಚನು ಚೆಲ್ಲುವ ಕಾಂತಿಯ ಈ ಕಣ್ಣಲ್ಲಿ ತುಂಬಿದನು (೨)

ದಾಳಿಂಬೆಯ ಹೂವಿನ ಎಸಳಿಂದ ಈ ತುಟಿಗಳ ಮಾಡಿದನು 

ಮೆತ್ತನೆ ತುಟಿಗಳು ಮುತ್ತಿಡಲೆಂದು ಜೇನನು ಸವರಿದನು ।।೧।।


ಜನುಮ ಜನುಮದ ಪೂಜೆಯ ಫಲ ತಂದ ವರ ನೀನು (೨)

ಬೆಳದಿಂಗಳೆ ಹೆಣ್ಣಿನ ರೂಪಾಗಿ ನನಗಾಗಿ ಬಂತೇನು 

ಅನುದಿನ ಹುಣ್ಣಿಮೆ ಇರುಳಿರಲೆಂದು ನಿನ್ನನು ಕಳಿಸಿದನು ।।೨।।


ಕಾಮನ ಬಿಲ್ಲಿನ ಬಣ್ಣಗಳ ಬೇರಾಗಿಸಲಾಗುವುದೇ (೨)

ಆ ಮಿನುಗುವ ತಾರೆ ಗಗನದ ಸ್ನೇಹ ಮರೆತಿರಲಾಗುವುದೇ 

ಬಾಳಲಿ ನಾನು ನಿನ್ನನು ಬಿಟ್ಟು ಬದುಕಿರಲಾಗುವುದೇ ।।೩।।                                               

                                         



No comments:

Post a Comment