Movie: Dhruvatare (1985)
Singers: Dr. Rajkumar, Bengaluru Latha
Song link: Click Here
Aa ratiye dharegilidante
Aa madana nagutiruvante
Kallu mullella balli moggella
Hoo baanavayito, enisutide ||
Mamara tuguta chamara hasuta
Parimala ellede chellutire
Gaganada anchali ranganu chelluta
Sandhyeyu natyava aadutire
Pranayada kaala bantu nodi endu haadi
Kogileyu naliyutire ||
Premada bhavake preetiya ragake
Mounave geeteya haadutire
Sarasada snehake olavina kanike
Needalu adharav aralutire
Endigu heege baluvase tumbi bandu
Premigalu naliyutire ||
ಚಿತ್ರಗೀತೆ
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂ ಬಾಣವಾಯಿತೋ, ಎನಿಸುತಿದೆ ।।ಪ।।
ಮಾಮರ ತೂಗುತ ಚಾಮರ ಹಾಸುತ
ಪರಿಮಳ ಎಲ್ಲೆಡೆ ಚೆಲ್ಲುತಿರೆ
ಗಗನದ ಅಂಚಲಿ ರಂಗನು ಚೆಲ್ಲುತ
ಸಂಧ್ಯೆಯು ನಾಟ್ಯವ ಆಡುತಿರೆ
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ
ಕೋಗಿಲೆಯು ನಲಿಯುತಿರೆ ।।೧।।
ಪ್ರೇಮದ ಭಾವಕೆ ಪ್ರೀತಿಯ ರಾಗಕೆ
ಮೌನವೇ ಗೀತೆಯ ಹಾಡುತಿರೆ
ಸರಸದ ಸ್ನೇಹಕೆ ಒಲವಿನ ಕಾಣಿಕೆ
ನೀಡಲು ಆಧಾರವು ಅರಳುತಿರೆ
ಎಂದಿಗೂ ಹೀಗೆ ಬಾಳುವಾಸೆ ತುಂಬಿ ಬಂದು
ಪ್ರೇಮಿಗಳು ನಲಿಯುತಿರೆ ।।೨।।
No comments:
Post a Comment