Movie: Baa Nalle Madhuchandrake (1993)
Singer: SPB
Song link: Click Here
Bandaalo bandaalo binkada singari
Bandaalo bandaalo chandira chakori
Tandaalo, tandaalo, tandaalo premada siri ||
Malebilla mele ilijaaro baale
Rati devi soundarya savati nee
Kavite nee, kavya spurti nee
Edeyaaladolavu hennagi banda
Bhuloka soundarya rani nee
Prana nee, neelaveni nee
Nakkaalo nakkaalo hunnime haalante
Ukkyaalo ukkyaalo tungeya neerante
Jeevanada chandrodayake, mai manada pranayaalayake ||
Malenada sirige mana sotu ninta
Hasirura giribale hennu nee, kannu nee, bala banna nee
Naduratriyalli jalarashi mele
Guri toro ekanta taare nee, neere nee, kavya dhare nee
Mudyalo mudyalo maagiya kanasante
Muttyalo muttyalo becchane muttante
Jeevanada chandrodayake maimanada pranayaalayake ||
ಚಿತ್ರಗೀತೆ
ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ
ಬಂದಾಳೋ ಬಂದಾಳೋ ಚಂದಿರ ಚಕೋರಿ
ತಂದಾಳೋ, ತಂದಾಳೋ, ತಂದಾಳೋ ಪ್ರೇಮದ ಸಿರಿ ।।ಪ।।
ಮಳೆಬಿಲ್ಲ ಮೇಲೆ ಇಳಿಜಾರೋ ಬಾಲೆ
ರತಿ ದೇವಿ ಸೌಂದರ್ಯ ಸವತಿ ನೀ
ಕವಿತೆ ನೀ, ಕಾವ್ಯ ಸ್ಫೂರ್ತಿ ನೀ
ಎದೆಯಾಳದೊಲವು ಹೆಣ್ಣಾಗಿ ಬಂದ
ಭೂಲೋಕ ಸೌಂದರ್ಯ ರಾಣಿ ನೀ
ಪ್ರಾಣ ನೀ, ನೀಲವೇಣಿ ನೀ
ನಕ್ಕಾಳೋ ನಕ್ಕಾಳೋ ಹುಣ್ಣಿಮೆ ಹಾಲಂತೆ
ಉಕ್ಕ್ಯಾಳೋ ಉಕ್ಕ್ಯಾಳೋ ತುಂಗೆಯ ನೀರಂತೆ
ಜೀವನದ ಚಂದ್ರೋದಯಕೆ, ಮೈ ಮನದ ಪ್ರಣಯಾಲಯಕೆ
।।೧।।
ಮಲೆನಾಡ ಸಿರಿಗೆ ಮನ ಸೋತು ನಿಂತ
ಹಸಿರೂರ ಗಿರಿಬಾಲೆ ಹೆಣ್ಣು ನೀ, ಕಣ್ಣು ನೀ, ಬಾಳ ಬಣ್ಣ ನೀ
ನಡುರಾತ್ರಿಯಲ್ಲಿ ಜಲರಾಶಿ ಮೇಲೆ
ಗುರಿ ತೋರೊ ಏಕಾಂತ ತಾರೆ ನೀ, ನೀರೆ ನೀ, ಕಾವ್ಯ ಧಾರೆ ನೀ
ಮೂಡ್ಯಾಳೋ ಮೂಡ್ಯಾಳೋ ಮಾಗಿಯ ಕನಸಂತೆ
ಮುತ್ತ್ಯಾಳೋ ಮುತ್ತ್ಯಾಳೋ ಬೆಚ್ಚನೆ ಮುತ್ತಂತೆ
ಜೀವನದ ಚಂದ್ರೋದಯಕೆ ಮೈಮನದ ಪ್ರಣಯಾಲಾಯಕೆ
।।೨।।
No comments:
Post a Comment