Monday, February 19, 2024

Hoovondu Bali Bandu (ಹೂವೊಂದು ಬಳಿ ಬಂದು)

Movie: Shubamangala (1975)

Singer: R N Sudarshan

Song link: Click Here


Hoovondu bali bandu

Takitu ennedeya

Enendu kelalu helitu

Jenanta sihi nudiya

Jenanta sihi nudiya ||


Kaveri seemeya kanyeyu nanu

Beluru baleya pratinidhi nanu

Tungeya, bhadreya (2) tourina hoo nanu ||


Suryana kantiya sundari nanu

Tingala belakina tangiyu nanu

Premada kavyake premada kavyake

Poojeya hoo nanu, poojeya hoo nanu ||


Arishina kunkuma shobhite naanu

Vadhuvina shringara bhushite naanu

Mangala sutrava (2) beduva hoo nanu ||


ಚಿತ್ರಗೀತೆ 


ಹೂವೊಂದು ಬಳಿ ಬಂದು 

ತಾಕಿತು ಎನ್ನೆದೆಯಾ 

ಏನೆಂದು ಕೇಳಲು ಹೇಳಿತು 

ಜೇನಂತ ಸಿಹಿ ನುಡಿಯಾ 

ಜೇನಂತ ಸಿಹಿ ನುಡಿಯಾ ।।ಪ।।


ಕಾವೇರಿ ಸೀಮೆಯ ಕನ್ಯೆಯು ನಾನು 

ಬೇಲೂರು ಬಾಲೆಯ ಪ್ರತಿನಿಧಿ ನಾನು 

ತುಂಗೆಯ ಭದ್ರೆಯ (೨) ತೌರಿನ ಹೂ ನಾನು ।।೧।।


ಸೂರ್ಯನ ಕಾಂತಿಯ ಸುಂದರಿ ನಾನು 

ತಿಂಗಳ ಬೆಳಕಿನ ತಂಗಿಯು ನಾನು 

ಪ್ರೇಮದ ಕಾವ್ಯಕೆ ಪ್ರೇಮದ ಕಾವ್ಯಕೆ 

ಪೂಜೆಯ ಹೂ ನಾನು, ಪೂಜೆಯ ಹೂ ನಾನು ।।೨।।


ಅರಿಶಿನ ಕುಂಕುಮ ಶೋಭಿತೆ  ನಾನು 

ವಧುವಿನ ಶೃಂಗಾರ ಭೂಷಿತೆ ನಾನು 

ಮಂಗಳ ಸೂತ್ರವ ಬೇಡುವ ಹೊ ನಾನು ।।೩।।

                             


No comments:

Post a Comment