Movie: Bettada Huli (1965)
Singer:P B Srinivas
Song link: Click Here
Aadutiruva modagale, harutiruva, hakkigale
Yara tadeyu nimagilla, nimma bhagya namagilla
Aadutiruva modagale ||
Obbanu tannaya saluvagi, halavara dochi naguvantha
Obbanello nagutiralu, koti mandi aluvantha
Lokaviduvante hoi.., papada sante (2)
Preeti elli, neeti elli, shantiyu ellide, jagadalli
Aadutiruva modagale, harutiruva hakkigale ||
Manujaru manujara daariyali
Mullanu haasi mareyuvaru
Aaseyinda mane katti, kadege mannali malaguvaru
Lokadi aata..hoi, jeeva janjaata (2)
Bedha, bhava, aalutiruva, lokadi, nyayada, neralalli ||
ಚಿತ್ರಗೀತೆ
ಆಡುತಿರುವಾ ಮೋಡಗಳೇ, ಹಾರುತಿರುವ, ಹಕ್ಕಿಗಳೇ
ಯಾರ ತಡೆಯೂ ನಿಮಗಿಲ್ಲ, ನಿಮ್ಮ ಭಾಗ್ಯ ನಮಗಿಲ್ಲ
ಆಡುತಿರುವಾ ಮೋಡಗಳೇ ।।ಪ।।
ಒಬ್ಬನು ತನ್ನಯ ಸಲುವಾಗಿ, ಹಲವರ ದೋಚಿ ನಗುವಂಥ
ಒಬ್ಬನೆಲ್ಲೋ ನಗುತಿರಲು, ಕೋಟಿ ಮಂದಿ ಅಳುವಂಥ
ಲೋಕವಿದುವಂತೇ ಹೋಯ್ ...., ಪಾಪದಾ ಸಂತೇ (೨)
ಪ್ರೀತಿ ಎಲ್ಲಿ, ನೀತಿ ಎಲ್ಲಿ, ಶಾಂತಿಯು ಎಲ್ಲಿದೆ, ಜಗದಲ್ಲಿ
ಆಡುತಿರುವಾ ಮೋಡಗಳೇ, ಹಾರುತಿರುವ ಹಕ್ಕಿಗಳೇ ।।೧।।
ಮನುಜರು ಮನುಜರ ದಾರಿಯಲಿ
ಮುಳ್ಳನು ಹಾಸಿ ಮರೆಯುವರು
ಆಸೆಯಿಂದ ಮನೆ ಕಟ್ಟಿ, ಕಡೆಗೆ ಮಣ್ಣಲಿ ಮಲಗುವರು
ಲೋಕದೀ ಆಟಾ .... ಹೋಯ್, ಜೀವ ಜಂಜಾಟ (೨)
ಬೇಧ ಭಾವ, ಆಳುತಿರುವ, ಲೋಕದಿ, ನ್ಯಾಯದ, ನೆರಳೆಲ್ಲಿ ।।೨।।

No comments:
Post a Comment