Movie: Aakasmika (1993)
Singer: Dr. Rajkumar
Song link: Click Here
Baaluvantha hoove baaduva aase eke (2)
Haaduvantha kogile aluva aase eke
Kavalu dariyalli baalu sadhyave
Avali doni mele yaana yogyave ||
Yarigilla novu, yarigilla saavu
Vyartha vyasanadinda sihiyu kuda bevu
Baalu ondu sante, sante tumba chinte
Madya madagalinda chinte belevudante
Anke irada manasanu dandisuvudu nyaya
Mooka mugdha dehava himsisuvudu heya
Sanna biruku saalade tumbu doni tala seralu
Sanna aluku saalade tumbu baduku baradaagalu ||
Baala kadanadalli bharavasegalu beku
Naale nannadennuva nambikegalu beku
Jeevarashiyalli manavarige aadyate
Naave moodaraadare jnanakkelli pujyate
Illi eesabeku iddu jaisabeku
Naagareekarada mele sugunaragabeku
Ninna haladi kannali janaraneke ne noduve
Manada donku kaanade jagavaneke nee durave ||
ಚಿತ್ರಗೀತೆ
ಬಾಳುವಂಥ ಹೂವೆ ಬಾಡುವ ಆಸೆ ಏಕೆ (೨)
ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ ।।ಪ।।
ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯೂ ಕೂಡ ಬೇವು
ಬಾಳು ಒಂದು ಸಂತೆ, ಸಂತೆ ತುಂಬಾ ಚಿಂತೆ
ಮದ್ಯ ಮದಗಳಿಂದ ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು ದಂಡಿಸುವುದು ನ್ಯಾಯ
ಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯಾ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು ।।೧।।
ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕ್ಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜೈಸಬೇಕು
ನಾಗರೀಕರಾದ ಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ ।।೨।।

No comments:
Post a Comment